Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಉರುಳು ಹಾಕಿಕೊಳ್ತಾರಾ?

ಖರ್ಗೆ
ನಾನು ಹಿಂದುಳಿದವ ಎಂದು ಮೋದಿ ಹೇಳಿಕೊಳ್ತಾನೆ. ಆದ್ರೆ ಮೋದಿ ಪ್ರಧಾನಿಯಾಗಿ ಹಿಂದುಳಿದವರಿಗೆ ಏನು ಪ್ರಯೋಜನ ಆಗಿದೆ? ಮೋದಿ ಎಲ್ಲವನ್ನೂ ಶ್ರೀಮಂತರಿಗಾಗಿಯೇ ಮಾಡಿದ್ದಾನೆ. ಹೀಗಂತ ಏಕವಚನದಲ್ಲಿ ಪ್ರಧಾನಿ ವಿರುದ್ಧ ಖರ್ಗೆ ಗುಡುಗಿದ್ದಾರೆ.

ಚಿಂಚೋಳಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಕೊಡದೂರು ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದು, ನಾನು ಕಿರುಕುಳ ಕೊಟ್ಟದ್ದಕ್ಕೆ ಪಕ್ಷ ಬಿಟ್ಟಿದ್ದಾಗಿ ಉಮೇಶ್  ಜಾಧವ್ ಹೇಳ್ತಾನೆ. ನಾನು ಆತನಿಗೆ ಕಿರುಕುಳ ಕೊಡೋ ಪ್ರಶ್ನೆಯೇ ಬರೋಲ್ಲ. ವಿನಾಕಾರಣ ಆರೋಪ ಮಾಡೋದು ಸರಿಯಲ್ಲ ಎಂದರು.

webdunia
ಎಲ್ಲವನ್ನೂ ಮೋದಿಯೇ ಮಾಡಿದ್ದಾನೆಯೇ? ಸ್ವಾತಂತ್ರ್ಯ ಬಂದಾಗ ಮೋದಿ ಇನ್ನೂ ಹುಟ್ಟಿರಲಿಲ್ಲ. ಕಾಂಗ್ರೆಸ್ ಗೆ 40 ಸೀಟು ಬರೋಲ್ಲ ಅಂತ ಮೋದಿ ಹೇಳ್ತಾನೆ. 40 ಕ್ಕಿಂತ ಹೆಚ್ಚು ಸೀಟು ಬಂದ್ರೆ ಮೋದಿ ದೆಹಲಿಯ ವಿಜಯ್ ಚೌಕ್ ನಲ್ಲಿ ಉರುಳು ಹಾಕ್ಕೊಳ್ತಾನಾ? ಅಂತಾ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವನಾಥ್ ಹೇಳಿಕೆಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ