Publish Date: Fri, 04 Dec 2020 (10:54 IST)
Updated Date: Fri, 04 Dec 2020 (10:56 IST)
ಬೆಂಗಳೂರು: ಮೊದಲ ರಾತ್ರಿ ದಿನವೇ ತನಗೆ ಕಿರುಕುಳ ಕೊಟ್ಟಿದ್ದಾರೆಂದು ಆರೋಪಿ ಪತ್ನಿ ಪೊಲೀಸರಿಗೆ ದೂರು ನೀಡಿದ ಘಟನೆ ಬೆಂಗಳೂರಿನ ಎಚ್ಎಎಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದೊಡ್ಡಬಾಣಸವಾಡಿ ನಿವಾಸಿ 25 ವರ್ಷದ ಯುವತಿ ತನ್ನ ಪತಿ ಮತ್ತು ಆತನ ಪೋಷಕರ ಮೇಲೆ ಹಲ್ಲೆ, ವಂಚನೆ ಪ್ರಕರಣ ದಾಖಲಿಸಿದ್ದಾಳೆ. ಈ ಸಂಬಂಧ ಪತಿಯನ್ನು ಬಂಧಿಸಲಾಗಿದೆ. ಮದುವೆಗೆಂದು ಲಕ್ಷಾಂತರ ರೂಪಾಯಿಗಳನ್ನು ವಧುವಿನ ಕಡೆಯವರಿಂದ ವೆಚ್ಚ ಮಾಡಿಸಿದ್ದರು. ಅಲ್ಲದೆ ಮೊದಲ ರಾತ್ರಿ ದಿನವೇ ಕಂಠಪೂರ್ತಿ ಕುಡಿದು ಹಲ್ಲೆಗೆ ಮುಂದಾಗಿದ್ದ. ಮರುದಿನ ಪತಿ ಹಾಗೂ ಅತ್ತೆ ತನ್ನ ಮೇಲೆ ಕಬ್ಬಿಣದ ರಾಡ್ ನಿಂದ ಹೊಡೆದು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.