ಬೆಂಗಳೂರು: ಇಂಧನ ಖಾಲಿಯಾಗುತ್ತಿರುವ ಹಿನ್ನೆಲೆ ಗುವಾಹಟಿ–ಚೆನ್ನೈ ನಡುವಿನ ಇಂಡಿಗೊ ವಿಮಾನ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ವರ್ಶವಾದ ಘಟನೆ ನಡೆದಿದೆ.
ವಿಮಾನ ಗುವಾಹಟಿಯಿಂದ ಚೆನ್ನೈಗೆ ತೆರಳುತ್ತಿತ್ತು. ಇಂಧನ ಖಾಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಪೈಲಟ್ ಕಂಟ್ರೋಲ್ ರೂಂಗೆ ಮೇಡೇ ಸಂದೇಶ ರವಾನಿಸಿದ್ದಾರೆ.
ಕೂಡಲೇ ಅಧಿಕಾರಿಗಳು ವಿಮಾನವನ್ನು ಬೆಂಗಳೂರಿನಲ್ಲಿ ಸೇಫ್ ಲ್ಯಾಂಡ್ ಮಾಡಲು ಸೂಚಿಸಿದ್ದರು. ಇದರಂತೆ ಪೈಲಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದರು ಎಂದು ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಈ ಘಟನೆ ಜೂ19ರಂದು ಗುರುವಾರ ನಡೆದಿದೆ. ವಿಮಾನದಲ್ಲಿ 168 ಪ್ರಯಾಣಿಕರು, ಇಬ್ಬರು ಪೈಲಟ್, ಐವರು ಗಗನಸಖಿಯರು ಸೇರಿ 175 ಜನರಿದ್ದರು.