Select Your Language

Notifications

webdunia
webdunia
webdunia
webdunia

ಒಂದೇ x ಅಕೌಂಟ್‌ನಿಂದ 46 ವಿಮಾನಗಳಿಗೆ ಬಾಂಬ್ ಬೆದರಿಕೆ

India Bomb Threat, India Airlines, Indigo Flight Bomb Threat

Sampriya

ನವದೆಹಲಿ , ಭಾನುವಾರ, 20 ಅಕ್ಟೋಬರ್ 2024 (17:35 IST)
Photo Courtesy X
ನವದೆಹಲಿ: ದೇಶದಲ್ಲಿ ಈಚೆಗೆ ಶಾಲೆ, ಕಾಲೇಜು ಹಾಗೂ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಇಮೇಲ್‌ ಪತ್ರಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಒಂದೇ ಇ ಮೇಲ್ ಅಕೌಂಟ್‌ನಿಂದ ಒಂದು ವಾರದಲ್ಲಿ 46 ವಿಮಾನಗಳಿಗೆ ಬೆದರಿಕೆ ಪತ್ರಗಳು ಬಂದಿದೆ.

ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ  ಸುಮಾರು ಶೇ 70 ರಷ್ಟು ಒಂದೇ ಮೂಲದಿಂದ ಬಾಂಬ್ ಬೆದರಿಕೆಗಳು ಬಂದಿದೆ. ಪರಿಶೀಲಿಸಿದಾಗ ಅನಾಮದೇಯ ಎಕ್ಸ್‌ನಿಂದ ಬೆದರಿಕೆಗಳು ಬಂದಿರುವುದು ತಿಳಿದುಬಂದಿದೆ.  

ಹ್ಯಾಂಡಲ್ - @adamlanza1111 ಐಡಿಯಿಂದ  ಶುಕ್ರವಾರ ರಾತ್ರಿ 12ಬೆದರಿಕೆಗಳು ಹಾಗೂ  ಶನಿವಾರ 34 ಬೆದರಿಕೆಗಳು ಬಂದಿದೆ. ಅದಲ್ಲದೆ ಬಳಕೆದಾರರು ಅಮೇರಿಕನ್ ಏರ್‌ಲೈನ್ಸ್, ಜೆಟ್ ಬ್ಲೂ ಮತ್ತು ಏರ್ ನ್ಯೂಜಿಲೆಂಡ್‌ನಂತಹ ಅಂತರರಾಷ್ಟ್ರೀಯ ವಿಮಾನಗಳಿಗೂ ಬೆದರಿಕೆಯನ್ನು ಹಾಕಿ ಪೋಸ್ಟ್ ಮಾಡಿದೆ.

ಏರ್ ಇಂಡಿಯಾ, ವಿಸ್ತಾರಾ, ಇಂಡಿಗೋ, ಆಕಾಶ ಏರ್, ಅಲಯನ್ಸ್ ಏರ್, ಸ್ಪೈಸ್ ಜೆಟ್ ಮತ್ತು ಸ್ಟಾರ್ ಏರ್ ಸೇರಿವೆ. ಸ್ಟಾರ್ ಏರ್ ತನ್ನ ನಾಲ್ಕು ವಿಮಾನಗಳಿಗೆ ಬೆದರಿಕೆಗಳನ್ನು ಸ್ವೀಕರಿಸಿದರೆ, ಇತರರು ತಲಾ ಐದು ವಿಮಾನಗಳಿಗೆ ಇದೇ ರೀತಿಯ ಸಂದೇಶಗಳನ್ನು ಪಡೆದರು.

ಪೋಸ್ಟ್‌ಗಳು ಒಂದೇ ರೀತಿಯ ಸಂದೇಶವನ್ನು ಹೊಂದಿದ್ದವು: 'ನಿಮ್ಮ ಐದು ವಿಮಾನಗಳಲ್ಲಿ ಬಾಂಬ್‌ಗಳಿವೆ ಯಾರೂ ಜೀವಂತವಾಗಿ ಉಳಿಯುವುದಿಲ್ಲ. ಕೂಡಲೇ ವಿಮಾನದ ದಿಕ್ಚೂಚಿ ಬದಲಾಯಿಸಿ' ಎಂದು ಬೆದರಿಕೆಯೊಡ್ಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಯಲ್ಲಿ ಬಾಂಬ್‌ ಸ್ಫೋಟಕ್ಕೆ ಬೆಚ್ಚಿಬಿದ್ದ ಜನತೆ, ಸ್ಥಳಕ್ಕೆ ತನಿಖಾಧಿಕಾರಿಗಳ ದೌಡು