Webdunia - Bharat's app for daily news and videos

Install App

ಮುಂಬೈ ದಾಳಿಗೆ ಸಿಂಗ್ರನ್ನು ಪ್ರಶ್ನಿಸಿದ್ದ ಮಾಧ್ಯಮಗಳು ಪುಲ್ವಾಮಾ ಬಗ್ಗೆ ಮೋದಿಯನ್ನೇಕೆ ಪ್ರಶ್ನಿಸಿಲ್ಲ?; ರಾಹುಲ್ ಗಾಂಧಿ

Webdunia
ಸೋಮವಾರ, 13 ಸೆಪ್ಟಂಬರ್ 2021 (08:03 IST)
ನವ ದೆಹಲಿ (ಸೆ 13) : "ಮುಂಬೈ ಮೇಲೆ ನಡೆದಿದ್ದ 26/11 ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ದೇಶದ ಎಲ್ಲಾ ಮಾಧ್ಯಮಗಳೂ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದಿದ್ದವು. ಅಲ್ಲದೆ, 'ದುರ್ಬಲ ಪ್ರಧಾನಿ' ಎಂದು ಹೀಯಾಳಿಸಲಾಗಿತ್ತು. ಆದರೆ, ಪುಲ್ವಾಮ ದಾಳಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಯಾವ ಮಾಧ್ಯಮಗಳು ಪ್ರಶ್ನಿಸಲಿಲ್ಲ. ಇನ್ನೂ ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಸ್ಥಾಪಿಸಿದ ಎಲ್ಲವನ್ನೂ ಬಿಜೆಪಿಯವರು ಏಳು ವರ್ಷಗಳಲ್ಲಿ ಮಾರಾಟ ಮಾಡಿದ್ದಾರೆ. ಆದರೆ, ಮಾಧ್ಯಮಗಳು ಈ ಬಗ್ಗೆಯೂ ಚಕಾರ ಎತ್ತುವುದಿಲ್ಲ" ಎಂದು ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ (ಎನ್ಎಸ್ಯುಐ) ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, "ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಕಟ್ಟಿ-ಬೆಳೆಸಿದ ಸಂಸ್ಥೆಗಳು-ಆಸ್ತಿಗಳನ್ನು ಬಿಜೆಪಿ ಸರ್ಕಾರ ಕೇವಲ 7 ವರ್ಷಗಳಲ್ಲಿ ಮಾರಾಟ ಮಾಡಿದೆ. ಕಾಂಗ್ರೆಸ್ ಪಕ್ಷ ಯಾವಾಗಲೂ ದೇಶ ಕಟ್ಟುವತ್ತ ಗಮನ ಹರಿಸುತ್ತದೆ. ಆದರೆ, ಬಿಜೆಪಿ ದೇಶವನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ.
ನಮ್ಮ ಪಕ್ಷದ 70 ವರ್ಷಗಳ ಶ್ರಮವನ್ನು ಬಿಜೆಪಿಯವರು ಕೇವಲ ಏಳು ವರ್ಷಗಳಲ್ಲಿ ಮಾರಾಟ ಮಾಡಿದ್ದಾರೆ. ಮುಂಬೈ ದಾಳಿ ನಡೆದಾಗ, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮಾಧ್ಯಮಗಳು ದುರ್ಬಲ ಪ್ರಧಾನಿ ಎಂದು ಕರೆದವು. ಆದರೆ, ಪುಲ್ವಾಮ ?ದಾಳಿಯ ಸಮಯದಲ್ಲಿ ಮಾಧ್ಯಮಗಳು ಏಕೆ ಪ್ರಶ್ನೆಗಳನ್ನು ಎತ್ತಲಿಲ್ಲ?"ಎಂದು ರಾಹುಲ್  ಗಾಂಧಿ ಪ್ರಶ್ನೆ ಮಾಡಿದ್ದಾರೆ.
"ಮುಂಬೈ ದಾಳಿಯಂತೆಯೇ ಹಲವು ಭಯೋತ್ಪಾದನೆ ಸಂಬಂಧಿತ ಘಟನೆಗಳು ಮೋದಿ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ನಡೆದಿವೆ. ಆದರೆ ಯುಪಿಎ ಅವಧಿಯಲ್ಲಿ ಮಾಧ್ಯಮಗಳು ಮಾಡಿದ್ದ ಕೆಲಸವನ್ನು ಈಗ ಮಾಡಲು ಮುಂದಾಗುತ್ತಿಲ್ಲ. ಭಾರತದ ಭೂ ಪ್ರದೇಶವನ್ನು ಚೀನಾ ಆಕ್ರಮಿಸಿದೆ. ರೈತರ ಆಂದೋಲ ರಾಜಕೀಯವಲ್ಲದಿದ್ದರೂ ಸಹ ಮಾಧ್ಯಮಗಳು ವರದಿ ಮಾಡುತ್ತಿಲ್ಲ.
ಹಲವಾರು ತಿಂಗಳುಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ವರ್ಷದಿಂದ ರೈತರು ದೆಹಲಿ ಗಡಿ ಪ್ರದೇಶಗಳಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಶಾಸನವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ, ಮಾಧ್ಯಮಗಳಿಗೆ ಇವು ಹೋರಾಟಗಳಂತೆಯೇ ಕಾಣದಿರುವುದು ವಿಪರ್ಯಾಸ" ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ. ಬಿಜೆಪಿ ಸರ್ಕಾರ ರೈತರ ಮಾತನ್ನು ಕೇಳುತ್ತಿಲ್ಲ. ಅವರ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಬದಲಾಗಿ ಪ್ರತಿಪಕ್ಷಗಳ ಧ್ವನಿ ಅಡಗಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಸಮಾರಂಭದಲ್ಲಿ ಭಾಗಿಯಾಗಿದ್ದ ರಾಜ್ಯಸಭಾ ಸಂಸದ ದೀಪೇಂದರ್ ಸಿಂಗ್ ಹೂಡಾ ಸಹ ಆರೋಪಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್ಥಿಕ ಒತ್ತಡ ಶಂಕೆ: ಪದಾರ್ಥ ಸೇವಿಸಿ ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ

ಸಂಪ್ರದಾಯವನ್ನು ಒಪ್ಪಿಕೊಂಡು ಒಂದೇ ಯುವತಿಯನ್ನು ಅಪ್ಪಿಕೊಂಡ ಇಬ್ಬರು ಸಹೋದರರು

ಎರಡು ದಶಕಗಳ ಕಾಲ ಕೋಮಾದಲ್ಲಿದ್ದ ಸೌದಿ ಅರೇಬಿಯಾದ ರಾಜಕುಮಾರ ಸ್ಲೀಪಿಂಗ್ ಪ್ರಿನ್ಸ್ ನಿಧನ

ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆ ನಿರೀಕ್ಷೆ: ದಕ್ಷಿಣ ಕನ್ನಡ, ಉಡುಪಿಯಲ್ಲಿ ರೆಡ್‌ ಅಲರ್ಟ್‌ ಘೋಷಣೆ

ಡಿಕೆಶಿಗೆ ಕ್ಯಾರೇ ಎನ್ನದ ಸಿದ್ದು, ಭುಗಿಲೆದ್ದ ಕಾಂಗ್ರೆಸ್ ಅಂತಃಕಲಹ, ಸೆಪ್ಟೆಂಬರ್‌ನಲ್ಲಿ ಮುಹೂರ್ತ ಫಿಕ್ಸ್: ಬಿಜೆಪಿ

ಮುಂದಿನ ಸುದ್ದಿ
Show comments