Webdunia - Bharat's app for daily news and videos

Install App

Atal Bihari Vajapayee Birthday: 1996 ರಲ್ಲಿ ವಾಜಪೇಯಿ ರಾಜೀನಾಮೆ ನೀಡಿದ್ದು ಯಾಕೆ

Krishnaveni K
ಬುಧವಾರ, 25 ಡಿಸೆಂಬರ್ 2024 (08:51 IST)
ನವದೆಹಲಿ: ಬಿಜೆಪಿ ಪಕ್ಷವನ್ನು ರಾಷ್ಟ್ರೀಯ ಮಟ್ಟದಲ್ಲಿ ಅಧಿಕಾರಕ್ಕೇರುವಂತೆ ಮಾಡಿದ್ದು ಅಟಲ್ ಬಿಹಾರಿ ವಾಜಪೇಯಿ. ಅವರ ಜನ್ಮದಿನ ಇಂದು. 1996 ರಲ್ಲಿ ಅವರು 13 ದಿನಗಳ ಪ್ರಧಾನಿಯಾದ ಬಳಿಕ ರಾಜೀನಾಮೆ ನೀಡಿದ್ದು ಯಾಕೆ ಮತ್ತು ಭಾಷಣದಲ್ಲಿ ಏನು ಹೇಳಿದ್ದರು ನೋಡಿ.

1996 ರಲ್ಲಿ 161 ಸ್ಥಾನ ಗೆದ್ದು ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಮತ ಸಾಧಿಸಲು 272 ಸ್ಥಾನಗಳು ಬೇಕು. ಆದರೂ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮ ವಾಜಪೇಯಿಯವರಿಗೆ ಸರ್ಕಾರ ರಚಿಸಲು ಅವಕಾಶ ಕೊಟ್ಟರು. ಅಲ್ಲದೆ ಬಹುಮತ ಸಾಧಿಸಲು 14 ದಿನಗಳ ಕಾಲಾವಕಾಶವನ್ನೂ ನೀಡಿದರು.

ಇದರ ಬೆನ್ನಲ್ಲೇ ಬಿಜೆಪಿಯ ಬಹುತೇಕ ನಾಯಕರು ಸಣ್ಣ ಸಣ್ಣ ಪಕ್ಷಗಳೊಂದಿಗೆ ಮಾತುಕತೆಗೆ ಮುಂದಾದರು. ಬಿಜೆಪಿಗೆ ಬೆಂಬಲ ನೀಡುವಂತೆ ಕೋರಿದರು. ಆದರೆ ಯಾರೂ ಬೆಂಬಲ ನೀಡಲೇ ಇಲ್ಲ. ಹೀಗಾಗಿ 14 ನೇ ದಿನಕ್ಕೆ ಸಂಸತ್ತಿಗೆ ಬಂದ ವಾಜಪೇಯಿಯವರು ವಿಶ್ವಾಸಮತ ಕೇಳುವ ಬದಲು ತಮ್ಮ 13 ದಿನಗಳ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು.

ಈ ವೇಳೆ ಅವರು ಮಾಡಿದ ಭೀಷ್ಮ ಪ್ರತಿಜ್ಞೆಯೊಂದು ಇಂದಿಗೂ ಬಿಜೆಪಿಯವರಿಗೆ ಸ್ಪೂರ್ತಿಯಾಗಿದೆ. ‘ನಾವು ಇಂದು ವಿಶ್ವಾಸಮತ ಸಾಬೀತುಪಡಿಸಲು ಸೋತಿರಬಹುದು. ನನ್ನನ್ನು ಅಧಿಕಾರದ ದುರಾಸೆಯಿಂದ ಬಹುತಮವಿಲ್ಲದಿದ್ದರೂ ಅಧಿಕಾರಕ್ಕೇರಿದ್ದೇನೆ ಎಂದು ಹಲವು ಹೀಗೆಳೆಯಬಹುದು. ಆದರೆ ಅಧಿಕಾರಕ್ಕಾಗಿ ನಾನು ಎಂದೂ ದುರಾಸೆಪಟ್ಟವನಲ್ಲ. ನಾವು ಇಷ್ಟಕ್ಕೇ ವಿಶ್ರಾಂತಿ ಪಡೆಯುವವರಲ್ಲ. ದೇವೇಗೌಡ ನೇತೃತ್ವದಲ್ಲಿ ನಿಮ್ಮದು ಪ್ರಬಲ ಮಿತ್ರಕೂಟವಾಗಿರಬಹುದು. ನೀವು ಅಧಿಕಾರಕ್ಕೇರುತ್ತಿರಬಹುದು. ತೊಂದರೆಯಿಲ್ಲ, ನಮ್ಮ ಸಂಪೂರ್ಣ ಸಹಕಾರ ಮತ್ತು ಹಾರೈಕೆ ನಿಮಗಿದೆ. ಆದರೆ ನಾವು ಇಲ್ಲಿಗೆ ವಿರಮಿಸುವುದಿಲ್ಲ. ಮುಂದೊಂದು ದಿನ ಬಹುಮತದೊಂದಿಗೆ ಬಂದೇ ಬರುತ್ತೇವೆ. ದೇಶದ ಹಿತಕ್ಕಾಗಿ ನಾವು ಕೆಲಸ ಮಾಡುತ್ತಲೇ ಇರುತ್ತೇವೆ’ ಎಂದು ವಾಜಪೇಯಿ ಶಪಥ ಮಾಡಿ ರಾಜೀನಾಮೆ ಸಲ್ಲಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments