Select Your Language

Notifications

webdunia
webdunia
webdunia
webdunia

ಪ್ರಧಾನಿ ನರೇಂದ್ರ ಮೋದಿ ಇವರೇನಾ? ಇವರು ನಕಲಿಯೋ, ಅಸಲಿಯೋ ನೀವೇ ಹೇಳಿ!!

ಪ್ರಧಾನಿ ನರೇಂದ್ರ ಮೋದಿ ಇವರೇನಾ? ಇವರು ನಕಲಿಯೋ, ಅಸಲಿಯೋ ನೀವೇ ಹೇಳಿ!!
NewDelhi , ಗುರುವಾರ, 16 ಫೆಬ್ರವರಿ 2017 (09:34 IST)
ನವದೆಹಲಿ: ಇತ್ತೀಚೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನೇ ಹೋಲುವ ವ್ಯಕ್ತಿಯೊಬ್ಬ ಕ್ರಿಕೆಟಿಗರನ್ನೇ ಬೇಸ್ತು ಬೀಳಿಸಿದ್ದ. ಇದೀಗ ಪ್ರಧಾನಿ ನರೇಂದ್ರ ಮೋದಿ ಸರದಿ. ತನ್ನನ್ನೇ ಹೋಲುವ ವ್ಯಕ್ತಿಯನ್ನು ಖುದ್ದಾಗಿ ಪ್ರಧಾನಿ ಮೋದಿ ಭೇಟಿ ಮಾಡಿದ್ದಾರೆ.

 
ಮಹಾರಾಷ್ಟ್ರದ ವಿಕಾಸ್ ಮಹಂತೆ ಪ್ರಧಾನಿಯನ್ನೇ ಹೋಲುವ ವ್ಯಕ್ತಿ. ಈತ ಪ್ರಧಾನಿ ಮೋದಿಯ ಗ್ರಾಮ ವಿಕಸನ ಯೋಜನೆಗಳನ್ನು ಪ್ರಚಾರಪಡಿಸುವ ‘ಮೋದಿ ಕಾ ಗಾವ್’ ಎಂಬ ಕಿರು ಸರಣಿಯಲ್ಲಿ ನಟಿಸುತ್ತಿದ್ದಾರೆ. ಮೋದಿಯ ಪಾತ್ರ ಮಾಡುತ್ತಿರುವ ವ್ಯಕ್ತಿ ಈತ.

ಥೇಟ್ ಅವರಂತೇ ವೇಷ ಹಾಕಿ ಕುಳಿತರೆ ಇವರು ಅಸಲಿ ಮೋದಿಯೋ, ನಕಲಿಯೋ ಎಂದು ಗೊತ್ತಾಗಲ್ಲ. ಅಷ್ಟು ಹೋಲಿಕೆ ಇಬ್ಬರಿಗೂ. ಹೀಗಾಗಿ ಈಗ ವಿಕಾಸ್ ಮಹಂತೆ ಎಲ್ಲೇ ಹೋದರೂ ಜನ ಅವರನ್ನು ಮುತ್ತಿಕೊಳ್ಳುತ್ತಾರಂತೆ!

ಇಂತಿಪ್ಪಾ ನಕಲಿ ಮೋದಿ ಅಸಲಿ ನರೇಂದ್ರ ಮೋದಿಯವರನ್ನು  ಕಳೆದ ಲೋಕಸಭೆ ಚುನಾವಣೆ ಸಂದರ್ಭ ಭೇಟಿಯಾಗಿದ್ದರಂತೆ. ಆಗ ಯಾರೋ ಮೋದಿಗೆ ನಿಮ್ಮಂತೇ ಕಾಣುವ ವ್ಯಕ್ತಿಯೊಬ್ಬ ನಿಮ್ಮ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದರಂತೆ. ಹಾಗಾಗಿ ಮೋದಿ ತಮ್ಮ ತದ್ರೂಪನ್ನು ಭೇಟಿಯಾಗಲು ಬಯಸಿದರಂತೆ. ಅದರಂತೆ ವಿಕಾಸ್ ಮೋದಿಯವರ ಬಳಿ ಹೋದಾಗ ಅವರು ಅವಕ್ಕಾಗಿ ಅಡಿಯಿಂದ ಮುಡಿಯವರೆಗೆ ನೋಡಿದರಲ್ಲದೆ, ಗೊಳ್ಳನೆ ನಕ್ಕು ಬಿಟ್ಟರಂತೆ. ಪ್ರಧಾನಿ ಮೋದಿ ಇಷ್ಟು ಜೋರಾಗಿ ನಕ್ಕಿದ್ದನ್ನು ನಾನು ಎಲ್ಲಿಯೂ ನೋಡೇ ಇರಲಿಲ್ಲ ಎಂದಿದ್ದಾರೆ ವಿಕಾಸ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಲ್ಲಿ ಶಶಿಕಲಾ ಮೊದಲ ದಿನ ಹೇಗಿತ್ತು?