Select Your Language

Notifications

webdunia
webdunia
webdunia
webdunia

ಜೈಲಿನಲ್ಲಿ ಶಶಿಕಲಾ ಮೊದಲ ದಿನ ಹೇಗಿತ್ತು?

ಜೈಲಿನಲ್ಲಿ ಶಶಿಕಲಾ ಮೊದಲ ದಿನ ಹೇಗಿತ್ತು?
ಬೆಂಗಳೂರು , ಗುರುವಾರ, 16 ಫೆಬ್ರವರಿ 2017 (09:29 IST)
ಅಕ್ರಮ ಆಸ್ತಿ ಪ್ರಕರಣದಡಿಯಲ್ಲಿ ನಿನ್ನೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ಶಶಿಕಲಾ ಅವರ ದಿನಚರಿ ಹೇಗಿತ್ತು ಗೊತ್ತಾ? 
ತಮಗೆ ಮನೆಯಿಂದ ತರಲಾದ ಆಹಾರ ಸೇವಿಸಲು ಅನುಮತಿ ನೀಡಬೇಕೆಂದು ಶಶಿಕಲಾ ಇಟ್ಟಿದ್ದ ಬೇಡಿಕೆಯನ್ನು ಕೋರ್ಟ್ ನಿನ್ನೆ ನಿರಾಕರಿಸಿತ್ತು. ನಿನ್ನೆ ಅವರಿಗೆ ಜೈಲಿನಲ್ಲಿ ತಯಾರಾದ ಊಟವನ್ನೇ ನೀಡಲಾಯ್ತು. ಮೊದಲು ಊಟ ಮಾಡಲು ನಿರಾಕರಿಸಿದ ಅವರು ಇಳವರಸಿ ಒತ್ತಾಯದ ಮೇರೆಗೆ 8 ಗಂಟೆ ಸುಮಾರಿಗೆ ಊಟ ಮಾಡಿದರು ಎನ್ನಲಾಗುತ್ತಿದೆ. ಆದರೆ ಕೆಲ ಮೂಲಗಳ ಪ್ರಕಾರ ಅವರು ನಿನ್ನೆ ಊಟವನ್ನು ಸೇವಿಸಿಲ್ಲ.
 
ಸಾಮಾನ್ಯ ಕೈದಿಗಳಿಗೆ ನೀಡಲಾಗುವ ಊಟವನ್ನೇ ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಅವರಿಗೆ ನೀಡಲಾಗಿತ್ತು. ಶಶಿಕಲಾ ಮತ್ತು ಇಳವರಸಿ ಒಂದೇ ಜೈಲಿನಲ್ಲಿದ್ದು ಇಬ್ಬರಿಗೂ ಜೈಲಿನ ಸಮವಸ್ತ್ರವನ್ನು ನೀಡಲಾಯಿತು. ಇಳವರಸಿ ಸಮವಸ್ತ್ರವನ್ನು ಧರಿಸಿದರೆ ಶಶಿಕಲಾ ಗುರುವಾರ ( ಇಂದು) ಧರಿಸುವುದಾಗಿ ಹೇಳಿ ತಾವುಟ್ಟುಕೊಂಡು ಬಂದ ಸೀರೆಯಲ್ಲಿಯೇ ರಾತ್ರಿ ಕಳೆದಿದ್ದಾರೆ.
 
ತಡರಾತ್ರಿಯವರೆಗೆ ಇಳವರಸಿ ಜತೆ ಚರ್ಚೆ ನಡೆಸಿದ ಅವರು ಜೈಲಿನ ಸಿಬ್ಬಂದಿ ಜತೆಗೂ ಮಾತುಕತೆ ನಡೆಸಿದರು. ರಾತ್ರಿ 11.45ರ ಸುಮಾರಿಗೆ ಹಾಸಿಗೆಗೆ ತೆರಳಿದ ಅವರು ಬೆಳಗಿನ ಜಾವದವರೆಗೂ ಎಚ್ಚರವಾಗಿಯೇ ಇದ್ದರು. ನಸುಕಿನ ಜಾವ 5 ಗಂಟೆ ಸುಮಾರಿಗೆ ಕೊಂಚ ನಿದ್ದೆ ಮಾಡಿದರು ಎಂದು ತಿಳಿದು ಬಂದಿದೆ.
 
ಮುಂಜಾನೆ 6.30ಕ್ಕೆ  ಕಾಫಿ ಕುಡಿದ ಅವರು ಜೈಲಿಗೆ ತರಿಸಲಾಗುವ ತಮಿಳು ಮತ್ತು ಇಂಗ್ಲೀಷ್ ಪತ್ರಿಕೆಗಳನ್ನು ಓದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇತ್ತ ಸೆರೆಮನೆ ಸೇರಿದ ಶಶಿಕಲಾ, ಅತ್ತ ಸಿಎಂ ಗದ್ದುಗೆಗಾಗಿ ಗದ್ದಲ