ನವದೆಹಲಿ: 2008 ರಲ್ಲಿ ಮುಂಬೈಯಲ್ಲಿ ನಡೆದಿದ್ದ ಉಗ್ರ ದಾಳಿಯ ರೂವಾರಿಯಾಗಿದ್ದ ಉಗ್ರ ತಹವ್ವೂರ್ ಅಮೆರಿಕಾದಿಂದ ಗಡೀಪಾರಾಗಿ ಈಗ ಭಾರತಕ್ಕೆ ಕರೆತರಲಾಗಿದೆ. ಈತ ನಿಜಕ್ಕೂ ಯಾರು, ಈತನ ಹಿನ್ನಲೆಯೇನು ನೋಡಿ.
ತಹವ್ವೂರ್ ರಾಣಾ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ. ಪಾಕಿಸ್ತಾನ ಸೇನೆಯಲ್ಲಿ ವೈದ್ಯನಾಗಿಯೂ ಸೇವೆ ಸಲ್ಲಿಸಿದ್ದ. ಈತ ಲಷ್ಕರ್ ಇ ತೈಬಾ ಸಂಘಟನೆಯ ಸಕ್ರಿಯ ಸದಸ್ಯ. 1990 ರಲ್ಲಿ ಈತ ಕೆನಡಾಕ್ಕೆ ವಲಸೆ ಹೋಗಿದ್ದ. ಕೆನಡಾ ನಾಗರಿಕತ್ವ ಪಡೆದುಕೊಂಡ ಬಳಿಕ ಶಿಕಾಗೋಗೆ ಶಿಫ್ಟ್ ಆಗಿದ್ದ.
ಮುಂಬೈ ದಾಳಿಗೆ ಮುನ್ನ ಹಲವು ಬಾರಿ ಈತ ಭಾರತಕ್ಕೂ ಭೇಟಿ ನೀಡಿದ್ದಾನೆ. ಇಲ್ಲಿನ ವಾತಾವರಣಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾನೆ. ಮುಂಬೈ ದಾಳಿ ಮಾಸ್ಟರ್ ಮೈಂಡ್ ಗಳಲ್ಲಿ ಒಬ್ಬಾತ ರಾಣಾ ಆಗಿದ್ದರೆ ಇನ್ನೊಬ್ಬಾತ ಡೇವಿಡ್ ಹೆಡ್ಲಿ. ಮುಂಬೈ ಮೇಲೆ ನಡೆಸಲು ಯೋಜನೆ ರೂಪಿಸಿದ್ದು, ಬೇಕಾದ ಸಾಮಗ್ರಿಗಳನ್ನು ಒದಗಿಸಿದ್ದು ಎಲ್ಲವೂ ಇವರಿಬ್ಬರೇ. ಅಮೆರಿಕಾದಲ್ಲಿ ನೆಲೆಸಿದ್ದ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಹಲವು ಸಮಯದಿಂದ ಭಾರತ ಬೇಡಿಕೆಯಿಡುತ್ತಲೇ ಇತ್ತು.
ಇದೀಗ ಅದರಲ್ಲಿ ಯಶಸ್ವಿಯಾಗಿದೆ. ಈಗ ಎನ್ಐಎ ಉಗ್ರ ರಾಣಾನನ್ನು ಭಾರತಕ್ಕೆ ಕರೆತಂದಿದೆ. ಇದೀಗ ಮುಂಬೈ ದಾಳಿ ವಿಚಾರವಾಗಿ ಆತನ ವಿಚಾರಣೆ ನಡೆಸಿ ಶಿಕ್ಷೆ ಕೊಡಿಸಲು ಎನ್ಐಎ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.