Publish Date: Mon, 10 Sep 2018 (06:32 IST)
Updated Date: Mon, 10 Sep 2018 (06:36 IST)
ಚಿಕ್ಕಮಗಳೂರು : ಪತ್ನಿ ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದನ್ನು ಕಣ್ಣಾರೆ ಕಂಡ ಪತಿ ಆಕೆಯ ತಲೆಯನ್ನು ಕತ್ತರಿಸಿ ಪೊಲೀಸ್ ಸ್ಟೇಷನ್ ಗೆ ತೆಗೆದುಕೊಂಡು ಬಂದು ಪೊಲೀಸರಿಗೆ ಶರಣಾದ ಘಟನೆ ತರೀಕೆರೆ ತಾಲೂಕಿನಲ್ಲಿ ನಡೆದಿದೆ.
ರೂಪ(30) ಕೊಲೆಯಾದ ಮಹಿಳೆ. ಸತೀಶ್ ಕೊಲೆ ಮಾಡಿರುವ ಪತಿ. ಇವರಿಬ್ಬರು 2 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ನಂತರ ರೂಪ ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದನ್ನು ಸತೀಶ್ ರೆಡ್ಹ್ಯಾಂಡ್ ಆಗಿ ಕಂಡು, ಕೋಪ ತಾಳಲಾರದೆ ಆಕೆಯ ತಲೆಯನ್ನು ಕತ್ತರಿಸಿ ಹತ್ಯೆ ಮಾಡಿದ್ದಾನೆ.
ನಂತರ ತಲೆಯನ್ನ ಬ್ಯಾಗ್‍ನಲ್ಲಿಟ್ಟುಕೊಂಡು 20 ಕಿ.ಮೀ. ಬಸ್ ಸಂಚಾರ ಮಾಡಿ, ಶಿವನಿ ರೈಲ್ವೆ ಸ್ಟೇಷನ್‍ನಿಂದ ಅಜ್ಜಂಪುರ ಠಾಣೆಗೆ ಬಂದು ಕತ್ತಿ ಹಾಗೂ ತಲೆಯನ್ನು ತಂದು ಪೊಲೀಸರಿಗೆ ಶರಣಾಗಿದ್ದಾನೆ. ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.