Select Your Language

Notifications

webdunia
webdunia
webdunia
Saturday, 12 April 2025
webdunia

ಪ್ರಧಾನಿ ಮೋದಿ ಯಾವ ಭರವಸೆಗಳನ್ನು ಈಡೇರಿಸಿದ್ದಾರೆ: ಸಿಬಲ್ ಕಿಡಿ

PM Modi
delhi , ಬುಧವಾರ, 27 ಡಿಸೆಂಬರ್ 2023 (15:42 IST)
ಪ್ರಧಾನಿ ಮೋದಿ ವಿದೇಶಿ ಬ್ಯಾಂಕ್‌ಗಳಲ್ಲಿರುವ 80 ಲಕ್ಷ ಕೋಟಿ ಹಣವನ್ನು ಮರಳಿ ತರುವುದಾಗಿ ಹೇಳಿದ್ದರು. ಕಪ್ಪು ಹಣ ಮರಳಿ ತಂದಿದ್ದಾರೆಯೇ? ಲೋಕಪಾಲ್ ಜಾರಿಗೊಳಿಸುವುದಾಗಿ ಹೇಳಿದ್ದರು ಜಾರಿಗೆ ತಂದರೆ? ಎಂದು ಪ್ರಶ್ನಿಸಿದರು. ಯಾವ ಭರವಸೆಗಳನ್ನು ಈಡೇರಿಸಿದ್ದಾರೆ? ದೇಶದ ಜನತೆ ಯಾಕೆ ಅವರನ್ನು ನಂಬಬೇಕು? ಪ್ರಧಾನಿ ಮೋದಿ ಮೇಲೆ ನಂಬಿಕೆಯಿಲ್ಲ. ಅವರು ನಂಬಿಕೆಗೆ ಅರ್ಹರಲ್ಲ ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಕಿಡಿಕಾರಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ತಾವೇ ನೀಡಿದ ಆಶ್ವಾಸನೆಗಳನ್ನು ಈಡೇರಿಸಿಲ್ಲವಾದ್ದರಿಂದ ಅವರ ನಂಬುವಂತಹ ವ್ಯಕ್ತಿಯಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಪಕ್ಷದ ವಕ್ತಾರ ಕಪಿಲ್ ಸಿಬಲ್, ಪ್ರಧಾನಿ ಮೋದಿ ನೋಟು ನಿಷೇಧ ಬಿಕ್ಕಟ್ಟು 50 ದಿನಗಳೊಳಗಾಗಿ ಬಗೆಹರಿಯಲಿದೆ ಎಂದು ಹೇಳಿದ್ದಾರೆ. ಆದರೆ, ಆರ್‌ಬಿಐ ಕನಿಷ್ಠ ಆರು ತಿಂಗಳಾದರೂ ಬೇಕು ಎಂದು ಪ್ರತಿಪಾದಿಸುತ್ತಿದೆ ಎಂದು ಲೇವಡಿ ಮಾಡಿದರು.   
 
ಲೋಕಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರೂ ಪ್ರಧಾನಮಂತ್ರಿ ಮೋದಿ ಲೋಕಸಭೆಯನ್ನು ಎದುರಿಸಲು ಸಿದ್ದರಿಲ್ಲ. ಬಿಜೆಪಿ ಮುಖಂಡರೇ ಮೋದಿಯ ವಿರುದ್ಧವಾಗಿದ್ದಾರೆ. ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಉತ್ತರಿಸಿದಂತಹ ಪ್ರಶ್ನೆಗಳನ್ನು ಕೇಳಲು ವಿಪಕ್ಷಗಳು ಸಿದ್ದವಾಗಿವೆ ಎಂದು ವಾಗ್ದಾಳಿ ನಡೆಸಿದರು.
 
ನೋಟು ನಿಷೇಧ ಬಿಕ್ಕಟ್ಟು ಎರಡು ದಿನಗಳಲ್ಲಿ ಸಾಮಾನ್ಯವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಅದು ಸಾಧ್ಯವಾಗಲಿಲ್ಲ. ಅಂದಿನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಎರಡು ವಾರಗಳಲ್ಲಿ ಪರಿಸ್ಥಿತಿ ತಹಬದಿಗೆ ಬರಲಿದೆ ಎಂದಿದ್ದರು. ಅದು ಕೂಡಾ ಆಗಲಿಲ್ಲ. ಹಾಗಾದ್ರೆ ನಾವು ಯಾಕೆ ಪ್ರಧಾನಿ ಮೋದಿಯವರನ್ನು ನಂಬಬೇಕು ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಹೆಚ್ಚಿದ ಬೈಕ್ ಕಳ್ಳರ ಹಾವಳಿ