Select Your Language

Notifications

webdunia
webdunia
webdunia
webdunia

Operation Sindoor: ಏರ್ ಸ್ಟ್ರೈಕ್ ನಡೆಸುತ್ತಿದ್ದಾಗ ಪ್ರಧಾನಿ ಮೋದಿ ಏನು ಮಾಡುತ್ತಿದ್ದರು ಗೊತ್ತಾ

PM Modi

Krishnaveni K

ನವದೆಹಲಿ , ಬುಧವಾರ, 7 ಮೇ 2025 (08:19 IST)
Photo Credit: X
ನವದೆಹಲಿ: ಒಂದೆಡೆ ಭಾರತೀಯ ವಾಯು ಸೇನೆ ಏರ್ ಸ್ಟ್ರೈಕ್ ನಡೆಸುತ್ತಿದ್ದರೆ ಇತ್ತ ಪ್ರಧಾನಿ ಮೋದಿ ತಮ್ಮ ಕಚೇರಿಯಲ್ಲಿ ಕುಳಿತು ಪ್ರತಿಕ್ಷಣದ ಮಾಹಿತಿ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಕಳೆದ ಕೆಲವು ದಿನಗಳಿಂದಲೂ ಭದ್ರತಾ ಪಡೆಗಳೊಂದಿಗೆ ನಿರಂತರ ಮೀಟಿಂಗ್, ಪ್ಲ್ಯಾನಿಂಗ್ ಮಾಡುತ್ತಿದ್ದ ಪ್ರಧಾನಿ ಮೋದಿ ನಿನ್ನೆ ಕಾರ್ಯಾಚರಣೆಯ ಹಂತದಲ್ಲೂ ಸೇನೆಯ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ತಮ್ಮ ಕಚೇರಿಯಲ್ಲೇ ಕುಳಿತು ಸೇನಾ ದಾಳಿಯ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿದ್ದರು. ಮಂಗಳವಾರ ತಡರಾತ್ರಿಯಿಂದ ಬುಧವಾರ ಮುಂಜಾವಿನವರೆಗೂ ಭಾರತೀಯ ಸೇನೆ ಅತ್ಯಾಧುನಿಕ ಯುದ್ಧ ವಿಮಾನ ಬಳಸಿ ದಾಳಿ ನಡೆಸಿದೆ.

ವಾರ್ ರೂಂನಲ್ಲಿ ಕುಳಿತು ಪ್ರಧಾನಿ ಮೋದಿ ಖುದ್ದಾಗಿ ಹಿರಿಯ ಅಧಿಕಾರಿಗಳಿಂದ ಕ್ಷಣ ಕ್ಷಣದ ಅಪ್ ಡೇಟ್ ಪಡೆಯುತ್ತಿದ್ದರು. ಅವರಿಗೆ ಖುದ್ದು ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಪಡೆಗಳ ಮುಖ್ಯಸ್ಥರು ಮಾಹಿತಿ ನೀಡುತ್ತಿದ್ದರು.

ಇದರ ಬೆನ್ನಲ್ಲೇ ಇಂದು ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಸಂಪುಟ ಸಭೆ ಕರೆದಿದ್ದಾರೆ. ಈ ವೇಳೆ ದಾಳಿಯ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Operation Sindoor: ಸರ್ಜಿಕಲ್ ಸ್ಟ್ರೈಕ್ ವೇಳೆ ಸಾಕ್ಷ್ಯ ಕೇಳಿದ್ದವರಿಗೆ ಈ ಬಾರಿ ವಿಡಿಯೋ ಸಾಕ್ಷಿ ಇಲ್ಲಿದೆ