Select Your Language

Notifications

webdunia
webdunia
webdunia
webdunia

Operation Sindoor: ಸರ್ಜಿಕಲ್ ಸ್ಟ್ರೈಕ್ ವೇಳೆ ಸಾಕ್ಷ್ಯ ಕೇಳಿದ್ದವರಿಗೆ ಈ ಬಾರಿ ವಿಡಿಯೋ ಸಾಕ್ಷಿ ಇಲ್ಲಿದೆ

Operation airstrike

Krishnaveni K

ಜಮ್ಮು ಕಾಶ್ಮೀರ , ಬುಧವಾರ, 7 ಮೇ 2025 (07:33 IST)
Photo Credit: X
ಜಮ್ಮು ಕಾಶ್ಮೀರ: ಉರಿ ಮತ್ತು ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾಗ ನಮ್ಮ ದೇಶದೊಳಗಿನ ನಾಯಕರೇ ಸಾಕ್ಷ್ಯ ಕೇಳಿದ್ದರು. ಈ ಬಾರಿ ಅದಕ್ಕೆ ಅವಕಾಶವೇ ಇಲ್ಲ. ಸಾಕ್ಷ್ಯ ಕೇಳುವವರಿಗೆ ಈ ಬಾರಿ ವಿಡಿಯೋ ಸಾಕ್ಷ್ಯವೇ ಸಿಕ್ಕಿದೆ.

ಭಾರತೀಯ ವಾಯುಸೇನೆ ಅತ್ಯಾಧುನಿಕ ಯುದ್ಧ ವಿಮಾನದ ಮೂಲಕ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ 9 ಕಡೆ ದಾಳಿ ನಡೆಸಿ ಬಂದಿದೆ. ಈ ದಾಳಿಯಲ್ಲಿ ಸಾಕಷ್ಟು ಉಗ್ರರನ್ನು ಹತ್ಯೆ ಮಾಡಲಾಗಿದೆ.

ಈ ಬಾರಿ ಭಾರತೀಯ ಸೇನೆಯ ಏರ್ ಸ್ಟ್ರೈಕ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಭಾರತ ಏರ್ ಸ್ಟ್ರೈಕ್ ಮೂಲಕ ಪಾಕಿಸ್ತಾನದ ಮೇಲೆ ಬಾಂಬ್ ದಾಳಿ ನಡೆಸುವ ವಿಡಿಯೋ ಮತ್ತು ಜನರು ಭಯಗೊಂಡು ಓಡಾಡುತ್ತಿರುವ ದೃಶ್ಯಗಳು ಇದರಲ್ಲಿ ಕಾಣಬಹುದಾಗಿದೆ.

ಈ ಬಾರಿ ಭಾರತೀಯ ಸೇನೆಯ ಕೆಲಸವನ್ನು ಯಾರೂ ಪ್ರಶ್ನೆ ಮಾಡುವ ಹಾಗೆಯೇ ಇಲ್ಲ. ಆ ರೀತಿ ಸೂಕ್ತ ಸಾಕ್ಷ್ಯಗಳು ಸಿಕ್ಕಿವೆ. ಘಟನೆಯಲ್ಲಿ ಈಗಿನ ವರದಿ ಪ್ರಕಾರ ಹತರಾಗಿರುವ ಉಗ್ರರ ಸಂಖ್ಯೆ 90 ಕ್ಕೇರಿದೆ. ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Operation Sindoor: ಭಾರತೀಯ ಸೇನಾ ದಾಳಿಗೆ ಆಪರೇಷನ್ ಸಿಂದೂರ್ ಎಂದೇ ಹೆಸರಿಟ್ಟಿದ್ದೇಕೆ ಇಲ್ಲಿದೆ ಕಾರಣ