Publish Date: Sat, 06 May 2017 (09:52 IST)
Updated Date: Sat, 06 May 2017 (09:55 IST)
ಲಕ್ನೋ: ಅದು ಉತ್ತರ ಪ್ರದೇಶ ಸಿಎಂ ಆಗಿ ಯೋಗಿ ಆದಿತ್ಯನಾಥ್ ಪದಗ್ರಹಣ ಮಾಡುವ ಸಮಾರಂಭ. ಕಾರ್ಯಕ್ರಮಕ್ಕೆ ವಿಪಕ್ಷ ನಾಯಕ ಮುಲಾಯಂ ಸಿಂಗ್ ಯಾದವ್ ಕೂಡಾ ಆಗಮಿಸಿದ್ದರು.
ಆದರೆ ಈ ಕಾರ್ಯಕ್ರಮದಲ್ಲಿ ಮುಲಾಯಂ ಪ್ರಧಾನಿ ಮೋದಿ ಜತೆ ಆತ್ಮೀಯವಾಗಿ ನಡೆದುಕೊಂಡರು. ಅಲ್ಲದೆ, ಮೋದಿಗೆ ಹಸ್ತಾಲಾಘವ ನೀಡಿ ಅವರ ಕಿವಿಯಲ್ಲಿ ಅದೇನೋ ಗುಟ್ಟು ಹೇಳಿದರು. ಅದೇ ಸಮಯಕ್ಕೆ ಅಲ್ಲಿದ್ದ ಫೋಟೋಗ್ರಾಫರ್ ಗಳು ಅದನ್ನು ಸೆರೆ ಹಿಡಿದವು.
ಈ ಸಂದರ್ಭದಲ್ಲಿ ಮುಲಾಯಂ ಮೋದಿಗೆ ಅಷ್ಟೊಂದು ರಹಸ್ಯವಾಗಿ ಏನು ಹೇಳಿರಬಹುದು ಎಂದು ಎಲ್ಲರೂ ಕುತೂಹಲ ವ್ಯಕ್ತಪಡಿಸಿದ್ದರು. ಅದಕ್ಕೆ ಪುತ್ರ ಮಾಜಿ ಸಿಎಂ ಅಖಿಲೇಶ್ ಯಾದವ್ ತಮಾಷೆಯಾಗಿ ಉತ್ತರ ನೀಡಿದ್ದಾರೆ.
‘ನೇತಾಜಿ (ಮುಲಾಯಂ), ನೋಡಿ ನನ್ನ ಇವನೇ ನನ್ನ ಮಗ ಅಖಿಲೇಶ್. ಅವನ ಮೇಲೆ ಕಣ್ಣಿಟ್ಟಿರಿ ಎಂದಿದ್ದರು’ ಎಂದು ಅಖಿಲೇಶ್ ತಮಾಷೆ ಮಾಡಿದ್ದಾರೆ. ಕೊನೆಗೆ ನಾನು ನನಗನಿಸಿದ್ದು ಹೇಳಿದ್ದಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ