ಚಂಡೀಘಡ: ಪಂಜಾಬ್ ನಲ್ಲಿ ಡ್ರಗ್ ವ್ಯಸನಿಗಳ ಸಂಖ್ಯೆ ಹೆಚ್ಚಿದ ಸಂಗತಿ ಈಗ ರಹಸ್ಯವಾಗಿಯೇನೂ ಉಳಿದಿಲ್ಲ. ಇದನ್ನು ತಡೆಗಟ್ಟಲು ಸರ್ಕಾರ ಸಕಲ ಪ್ರಯತ್ನ ನಡೆಸುತ್ತಿದೆಯಾದರೂ ಅದು ಸುಲಭವಲ್ಲ. ಇದೇ ಕಾರಣಕ್ಕೆ ಪಂಜಾಬ್ ನಲ್ಲಿ ಮದುವೆಯೊಂದು ಮುರಿದು ಬಿದ್ದಿದೆ.
ವಧು ಸುನಿತಾ ಮದುವೆ ಮುರಿದುಕೊಂಡ ವಧು. ಅಲಂಕಾರ ಮಾಡಿಕೊಂಡು ವರಮಾಲೆ ಹಾಕಲು ಕಾಯುತ್ತಿದ್ದವಳಿಗೆ ಆತ ಮಾದಕ ವಸ್ತು ಸೇವಿಸಿ ಬಂದಿರುವುದು ಗೊತ್ತಾಯಿತು. ತಕ್ಷಣ ಆಕೆ ಆತನನ್ನು ಮದುವೆ ಮಾಡಿಕೊಳ್ಳುವ ಬದಲು ಪೊಲೀಸ್ ಠಾಣೆಗೆ ಕರೆದೊಯ್ದಳು.
ಅಲ್ಲಿ ತಕ್ಷಣಕ್ಕೆ ಡ್ರಗ್ ಪರೀಕ್ಷೆ ಮಾಡುವ ಉಪಕರಣ ಲಭ್ಯವಿರಲಿಲ್ಲ. ಅಷ್ಟಕ್ಕೇ ಸುಮ್ಮನೆ ಬಿಡದ ಆಕೆ ಹತ್ತಿರದ ಪ್ರಯೋಗಾಲಯಕ್ಕೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿಯೇ ಬಿಟ್ಟಳು. ಆಗ ಆತ ಡ್ರಗ್ ಸೇವಿಸಿದ್ದು ಪತ್ತೆಯಾಯಿತು.
ನಂತರ ಆತನೊಂದಿಗೆ ಮದುವೆಯನ್ನೂ ಮುರಿದುಕೊಂಡಳು. ವರ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ವಧುವಿನ ತಂದೆಯೂ ಟ್ರಕ್ ಚಾಲಕನಾಗಿದ್ದರಿಂದ ಅದರ ಕಷ್ಟ ನಷ್ಟ ಅರಿತು ವಧು ಇಂತಹ ನಿರ್ಧಾರಕ್ಕೆ ಬಂದಳು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ