Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಬಗ್ಗೆ ಎಲ್.ಕೆ.ಆಡ್ವಾಣಿ ಹೇಳಿದ್ದೇನು ಗೊತ್ತಾ?

ಕಾಂಗ್ರೆಸ್ ಬಗ್ಗೆ ಎಲ್.ಕೆ.ಆಡ್ವಾಣಿ ಹೇಳಿದ್ದೇನು ಗೊತ್ತಾ?
delhi , ಮಂಗಳವಾರ, 7 ನವೆಂಬರ್ 2023 (08:56 IST)
ಇಂಡಿಯಾಸ್ ಬಿಸ್ಮಾರ್ಕ್ ಕುರಿತಂತೆ ಆಡ್ವಾಣಿ, ಅಂದಿನ ಪ್ರಧಾನಮಂತ್ರಿ ನೆಹರು ಅಂದು ಗೃಹ ಸಚಿವರಾಗಿದ್ದ ಸರ್ದಾರ ವಲ್ಲಭಬಾಯಿ ಪಟೇಲ್‌ ಅವರ ಸಲಹೆ ಮತ್ತು ಶಿಫಾರಸ್ಸುಗಳನ್ನು ಯಾವ ರೀತಿ ವಿರೋಧಿಸುತ್ತಿದ್ದರು ಎನ್ನುವ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ದಾಖಲಿಸಿದ್ದಾರೆ.
 
ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಮತ್ತು ಸರ್ಧಾರ ವಲ್ಲಭ ಭಾಯಿ ಪಟೇಲ್ ಮಧ್ಯದ ವಿವಾದ ತಣ್ಣಗಾಗುತ್ತಿರುವಂತೆ ಸರ್ಧಾರ ಪಟೇಲ್‌ರ ನೀತಿಗಳು ನೆಹರು ವಿರೋಧಿಸುತ್ತಿದ್ದರು ಎಂದು ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ.ಆಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ಬರೆದಿರುವುದು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
 
ಪ್ರಜಾಪ್ರಭುತ್ವದಲ್ಲಿ ಪೊಲೀಸ್ ಕಾರ್ಯಾಚರಣೆ ನಡೆಸಲು ಸಚಿವ ಸಂಪುಟದ ಅನುಮೋದನೆ ಅಗತ್ಯ ಆದರೆ, ಹೈದ್ರಾಬಾದ್‌ನ ನಿಜಾಮರ ವಿರುದ್ಧ ಕಾರ್ಯಚರಣೆ ನಡೆಸಲು ಪ್ರಧಾನಿ ಹಿಂದೇಟು ಹಾಕಿದ್ದರು ಎಂದು ಇತಿಹಾಸವನ್ನು ಕೆದಕಿದ್ದಾರೆ.
 
ನಂತರ, ಅಂದಿನ ಗವರ್ನರ್ ಜನರಲ್ ರಾಜಗೋಪಾಲಚಾರಿ, ಗೃಹ ಸಚಿವ ಪಟೇಲ್ ಮತ್ತು ಗೃಹ ಕಾರ್ಯದರ್ಶಿ ಮೆನನ್‌ ಪರಸ್ಪರರು ಚರ್ಚಿಸಿ ಹೈದ್ರಾಬಾದ್ ನಿಜಾಮರ ವಿರುದ್ಧ ಕಾರ್ಯಾಚರಣೆ ನಡೆಸಲಾಯಿತು ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ವಿವರಣೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೃಹತ್ ಕಾಳಿಂಗ ಸರ್ಪ ರಕ್ಷಣೆ