ನವದೆಹಲಿ : ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿ ಭಾರತದ ಸೈನಿಕರು ಮತ್ತೆ ಕೆಚ್ಚೆದೆಯ ಹೋರಾಟ ನಡೆಸಿದ್ದಾರೆ.
ಯಾವುದೇ ಸಿದ್ಧತೆ ಇಲ್ಲದೇ ಇದ್ದರೂ ಆಕ್ರಮಣಕಾರಿ ಹೋರಾಟ ಮಾಡಿ ಚೀನಿ ಸೈನಿಕರನ್ನು ನಮ್ಮ ಹೆಮ್ಮೆಯ ಯೋಧರು ಓಡಿಸಿದ್ದಾರೆ. ಈ ಘರ್ಷಣೆಯ ಬಳಿಕ ಚೀನಾ ʼವಾರ್ನಿಂಗ್ ಶಾಟ್ʼ ಮೂಲಕ ಎಚ್ಚರಿಕೆಯ ಸಂದೇಶ ಕಳುಹಿಸಿದ್ದ ವಿಚಾರವೂ ಈಗ ಬೆಳಕಿಗೆ ಬಂದಿದೆ.
ಡಿಸೆಂಬರ್ 9ರಂದು ಭಾರತ-ಚೀನಾ ಸೇನೆಗಳ ನಡುವೆ ನಡೆದ ಸಂಘರ್ಷದ ಹಿನ್ನೆಲೆ, ಮುನ್ನೆಲೆಗಳನ್ನು ಕೆದಕುತ್ತಾ ಹೋದಂತೆ ಚೀನಾ ಕುತಂತ್ರದ ಸ್ಫೋಟಕ ಮಾಹಿತಿಗಳು ಮಾಹಿತಿಗಳು ಲಭ್ಯ ಆಗುತ್ತಿವೆ.