ನವದೆಹಲಿ: ಕೇಂದ್ರ ಸರ್ಕಾರ ಒಂದೇ ದೇಶ ಒಂದೇ ಚುನಾವಣೆ ಎಂಬ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ವಿರೋಧ ಪಕ್ಷಗಳಿಂದ ವಿರೋಧವೂ ವ್ಯಕ್ತವಾಗಿದೆ. ಅಷ್ಟಕ್ಕೂ ಒಂದೇ ದೇಶ, ಒಂದೇ ದೇಶ ಚುನಾವಣೆ ನೀತಿಯ ಲಾಭ, ನಷ್ಟಗಳೇನು ಎಂಬ ವಿವರ ಇಲ್ಲಿದೆ.
ಹಲವು ವರ್ಷಗಳಿಂದ ಒಂದೇ ದೇಶ ಒಂದು ಚುನಾವಣೆ ಹಲವು ವರ್ಷಗಳಿಂದ ಚರ್ಚೆಯಲ್ಲಿತ್ತು. ಇದೀಗ ಕೇಂದ್ರ ಸರ್ಕಾರ ನೀತಿಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ಪಟ್ಟು ಹಿಡಿದಿದೆ. ಇತ್ತ, ವಿಪಕ್ಷಗಳು ಇದರಿಂದ ಒಕ್ಕೂಟ ವ್ಯವಸ್ಥೆಗೆ ತೊಂದರೆಯಾಗುತ್ತದೆ ಎನ್ನುತ್ತಿದೆ.
ಏಕ ಚುನಾವಣೆ ಲಾಭಗಳೇನು, ಜಾರಿ ಹೇಗೆ
ಒಂದೇ ಹಂತದಲ್ಲಿ ಲೋಕಸಭೆ, ವಿಧಾನಸಭೆಗೆ ಚುನಾವಣೆ ನಡೆಸುವುದು. ಇದರಿಂದ ಆರ್ಥಿಕ ಹೊರೆ ತಗ್ಗುತ್ತದೆ. ಲೋಕಸಭೆ, ವಿಧಾನಸಭೆ ಚುನಾವಣೆ ನಡೆದ 100 ದಿನಗಳೊಳಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು. ಯಾವುದಾದರೂ ರಾಜ್ಯದಲ್ಲಿ ಅವಧಿಗೆ ಮುನ್ನ ಸರ್ಕಾರ ಪತನವಾದರೆ ಮುಂದಿನ ಲೋಕಸಭೆ ಚುನಾವಣೆವರೆಗಿನ ಅವಧಿಗೆ ಮಾತ್ರ ಚುನಾವಣೆ ನಡೆಸುವುದು ಯೋಜನೆಯ ಉದ್ದೇಶವಾಗಿದೆ.
ಕೇಂದ್ರದ ವಾದ
ದೇಶದಾದ್ಯಂತ ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಇದರಿಂದ ಖರ್ಚು ಉಳಿತಾಯವಾಗುತ್ತದೆ. ಚುನಾವಣೆ ವೆಚ್ಚ ಇಳಿದರೆ ಅಭಿವೃದ್ಧಿಗೆ ವೇಗ ಸಿಗುತ್ತದೆ. ಏಕ ಚುನಾವಣೆಯಿಂದ ಮತದಾನದ ಪ್ರಮಾಣ ಹೆಚ್ಚಾಗುತ್ತದೆ. ನೀತಿ ಸಂಹಿತೆ ಅಡ್ಡಿಯಿಲ್ಲದೇ ಸರ್ಕಾರೀ ಯೋಜನೆಗಳನ್ನು ಜಾರಿ ಮಾಡಬಹುದು. ಅಕ್ರಮ ಆರ್ಥಿಕ ವಹಿವಾಟುಗಳಿಗೆ ಕಡಿವಾಣ ಬೀಳುತ್ತದೆ ಎನ್ನುವುದು ಕೇಂದ್ರದ ವಾದವಾಗಿದೆ.
ವಿಪಕ್ಷಗಳ ವಿರೋಧಕ್ಕೆ ಕಾರಣವೇನು?
ಪ್ರಾಯೋಗಿಕವಾಗಿ ನೋಡಿದರೆ ಈ ಯೋಜನೆ ಜಾರಿಗೆ ತರುವುದು ಸುಲಭವಲ್ಲ. ಇದು ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಮಾಡುತ್ತಿರುವ ತಂತ್ರವಷ್ಟೇ. ಒಂದೇ ಪಕ್ಷದ ಆಡಳಿತವಿರುವಂತಾಗುತ್ತದೆ. ಲೋಕಸಭೆ ಚುನಾವಣೆ ಅಬ್ಬರದಲ್ಲಿ ರಾಜ್ಯ ಚುನಾವಣೆಗಳು ಮಹತ್ವ ಕಳೆದುಕೊಳ್ಳುತ್ತವೆ ಎಂಬುದು ವಿಪಕ್ಷಗಳ ವಾದವಾಗಿದೆ.