ನವದೆಹಲಿ : ಪಾರ್ಸಿ ಸಮುದಾಯವನ್ನು ಕಾಪಾಡುವ ರಕ್ಷಿಸುವ ಹಾಗೂ ಸಮುದಾಯದ ಜನಸಂಖ್ಯೆಯನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಪಾರ್ಸಿ ಸಮುದಾಯದ ಯುವಕ,
ಯುವತಿಯರಿಗಾಗಿಯೇ ಸ್ವತಃ ಕೇಂದ್ರ ಸರ್ಕಾರವೇ ಆನ್ಲೈನ್ ಡೇಟಿಂಗ್ ವ್ಯವಸ್ಥೆ ಆರಂಭಿಸಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯದ ನೆರವಿನಡಿ ಪರ್ಜೋರ್ ಫೌಂಡೇಷನ್ ಇಂತಹದ್ದೊಂದು ಯೋಜನೆ ಜಾರಿಗೆ ತಂದಿದೆ ಎಂದು ಸಂಸ್ಥೆಯ ನಿರ್ದೇಶಕ ಶೆರ್ನಾಜ್ ಕಾಮಾ ಹೇಳಿದ್ದಾರೆ.
ಈ ಯೋಜನೆಯಡಿ ನಾವು ಸಮುದಾಯದ ಕಾರ್ಯಕ್ರಮಗಳಿಗೆ ಹಾಜರಾಗುವ ಯುವಕ-ಯುವತಿಯರನ್ನು ಸಂದರ್ಶಿಸಿ ಅವರ ಬೇಕು-ಬೇಡ ಮೊದಲಾದ ವಿಷಯಗಳನ್ನು ಸಂಗ್ರಹಿಸುತ್ತೇವೆ.
ಬಳಿಕ ಸಮಾನ ಆಸಕ್ತಿ ಹೊಂದಿರುವ ಜೋಡಿಗಳನ್ನು ಆನ್ಲೈನ್ ಮೂಲಕ ಪರಸ್ಪರ ಭೇಟಿಗೆ ಅವಕಾಶ ಕಲ್ಪಿಸುತ್ತೇವೆ. ಮದುವೆಯಾಗಲು ನಿರಾಸಕ್ತಿ ಹೊಂದಿದದವರಿಗೆ ಕೌನ್ಸಿಲಿಂಗ್ ನೀಡುತ್ತೇವೆ ಎಂದು ಹೇಳಿದ್ದಾರೆ.