Select Your Language

Notifications

webdunia
webdunia
webdunia
webdunia

ಇದಪ್ಪಾ ಜಾಲಿ ರೈಡ್ ಅಂದ್ರೆ ..!!!! ಶಾಕ್ ಆದ್ರೂ ಪೊಲೀಸರು ...!!!

New year
ಬೆಂಗಳೂರು , ಶುಕ್ರವಾರ, 22 ಜುಲೈ 2022 (19:52 IST)
ಕಾರಿನಲ್ಲಿ ಚಾಲಕನ ಜೊತೆ ನಾಲ್ಕು ಜನ ಕೂತು ಪ್ರಯಾಣಿಸಬಹುದು. ಅಬ್ಬಬ್ಬಾ ಅಂದ್ರೆ ಮತ್ತೊಬ್ಬರನ್ನು ತೊಡೆ ಮೇಲೆ ಕೂರಿಸಿಕೊಳ್ಳಬಹುದು.
 
ಇಲ್ಲೊಬ್ಬ ವ್ಯಕ್ತಿ ಸರಕು ಇಡುವ ಡಿಕ್ಕಿಯಲ್ಲಿ ವ್ಯಕ್ತಿಯನ್ನು ಕೂರಿಸಿಕೊಂಡು ಪ್ರಯಾಣ ಮಾಡಿರುವ ವೀಡಿಯೋ ವೈರಲ್ ಆಗಿದೆ.
 
ಹುಬ್ಬಳ್ಳಿಯ ಜನನಿಬಿಡ ರಸ್ತೆಯಲ್ಲಿ ಇಂಥದ್ದೊಂದು ದೃಶ್ಯ ನೋಡಿ ಜನ ಹುಬ್ಬೇರಿಸಿದ್ದಾರೆ. ಕಾರು ನಗರದ ಚೆನ್ನಮ್ಮ ವೃತ್ತದಿಂದ ಗೋಪನಕೊಪ್ಪದ ಕಡೆ ಸಂಚರಿಸುತ್ತಿತ್ತು. ಕೆಲವೆಡೆ ಕಾರಿನ ಡಿಕ್ಕಿಯಲ್ಲಿದ್ದ ವ್ಯಕ್ತಿ ಅಡ್ಡಲಾಗಿ ಮಲಗಿದ್ದ. ಕೆಲವರು ಶವವನ್ನು ಡಿಕ್ಕಿಯಲ್ಲಿಟ್ಟುಕೊಂಡು ಹೋಗುತ್ತಿದ್ದಾರಾ? ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಆತ ಅಲುಗಾಡುತ್ತಿದ್ದುದರಿಂದ ಜೀವಂತವಾಗಿರೋದು ಖಾತ್ರಿಯಾಗಿದೆ.
 
ವಾಹನದ ಡಿಕ್ಕಿಯಲ್ಲಿ ಕುಳಿತು ಅಪಾಯ ಲೆಕ್ಕಿಸದೆ ಪ್ರಯಾಣ ಮಾಡುವುದು ಎಷ್ಟು ಸರಿ? ಎಂದು ಜನರು ಪ್ರಶ್ನಿಸಿದ್ದಾರೆ. ಅದರಲ್ಲೂ ಹುಬ್ಬಳ್ಳಿಯ ಬಹುತೇಕ ರಸ್ತೆಗಳು ಗುಂಡಿಗಳಿಂದ ತುಂಬಿವೆ. ಹೀಗಿರುವಾಗ ಅಪ್ಪಿತಪ್ಪಿ ಗುಂಡಿಯಲ್ಲಿ ಏನಾದ್ರೂ ಬಿದ್ದಿದ್ದರೆ ಗತಿಯೇನೆಂದು ಕೇಳಿದ್ದಾರೆ. ವಿಚಿತ್ರ ಅಂದ್ರೆ, ಪೊಲೀಸರ ಮುಂದೆಯೇ ಈ ಕಾರು ಹಾದು ಹೋದರೂ ಅವರು ತಲೆಕೆಡಿಸಿಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವನ್ ಒಡೆಯರ್ ಚಿತ್ರಕ್ಕೆ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ...