Publish Date: Mon, 21 Sep 2020 (11:14 IST)
Updated Date: Mon, 21 Sep 2020 (11:20 IST)
ಉತ್ತರ ಪ್ರದೇಶ : ಅಪ್ರಾಪ್ತೆ ಬಾಲಕಿಯ ಮೇಲೆ ಮಾನಭಂಗ ಎಸಗಿದ ಆರೋಪದ ಮೇಲೆ ಬಂಧಿಸಲ್ಪಟ್ಟ 40 ವರ್ಷದ ವ್ಯಕ್ತಿಯೊಬ್ಬ ಸಮೈಪುರ್ ಬದ್ಲಿ ಪೊಲೀಸ್ ಠಾಣೆಯ ಲಾಕ್ ಅಪ್ ಒಳಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಧರ್ಮೇಂದ್ರ(40) ಮೃತಪಟ್ಟ ಆರೋಪಿ. ಈತನನ್ನು ಕೊಲೆ ಕಮ್ ದರೋಡೆ ಪ್ರಕರಂದಲ್ಲಿ ಅರೆಸ್ಟ್ ಮಾಡಲಾಗಿತ್ತು. ಆದರೆ ಆತ ಸಮೈಪುರ್ ಬದ್ಲಿ ಪೊಲೀಸ್ ಠಾಣೆಯ ಲಾಕ್ ಅಪ್ ಒಳಗೆ ಬೆಡ್ ಶೀಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹಿನ್ನಲೆಯಲ್ಲಿ ಡ್ಯೂಟಿಯಲ್ಲಿದ್ದ ಕಾನ್ ಸ್ಟೇಬಲ್ ನ್ನು ಬೇಜವಾಬ್ದಾರಿ ಕಾರಣದಿಂದ ಅಮಾನತು ಮಾಡಲಾಗಿದೆ.
ಆದರೆ ಆರೋಪಿ ಮನೆಯವರು ಮಾತ್ರ ಪೊಲೀಸರು ಥಳಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪವನ್ನು ಪೊಲೀಸರು ತಳ್ಳಿಹಾಕಿದ್ದಾರೆ.