Webdunia - Bharat's app for daily news and videos

Install App

ಕಲ್ಲು ಮನಸ್ಸಿನ ಆ ಕ್ರೂರಿ ತಾಯಿ ಮಾಡಿದ್ದೇನು!?

Webdunia
ಮಂಗಳವಾರ, 14 ಡಿಸೆಂಬರ್ 2021 (08:46 IST)
ತಿರುವನಂತಪುರಂ : 27 ದಿನದ ನವಜಾತ ಶಿಶುವಿನ ತಲೆಯನ್ನು ಹೆತ್ತ ತಾಯಿಯೇ ಗೋಡೆಗೆ ಬಡಿದು ಕ್ರೂರವಾಗಿ ಕೊಂದಿರುವ ಘಟನೆ ಕೇರಳದಲ್ಲಿ ನಡೆದಿದೆ.

ಮಗು ಅನಾರೋಗ್ಯದಿಂದ ಬಳಲುತ್ತಿದ್ದು, ನಿರಂತರವಾಗಿ ಅಳುತ್ತಿದ್ದ ಕಾರಣ 21 ವರ್ಷದ ತಾಯಿಯೇ ಕೃತ್ಯವೆಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಈ ಘಟನೆ ಡಿಸೆಂಬರ್ 9ರಂದು ನಡೆದಿದ್ದು, ಅಂದು ಬೆಳಗ್ಗೆ 11 ಗಂಟೆಗೆ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಚಿಕಿತ್ಸೆ ಬಳಿಕ ಮನೆಗೆ ಹಿಂದಿರುಗಿದ್ದರು. ಆದರೆ ಮಧ್ಯಾಹ್ನದ ವೇಳೆಗೆ ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಹಾಗಾಗಿ ಮಗುವನ್ನು ಆಸ್ಪತ್ರೆಗೆ ಮತ್ತೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಾಕಾರಿಯಾಗಿದೆ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಪೊಲೀಸರಿಗೆ ತಿಳಿಸಿದ್ದರು.

ತನಿಖೆ ವೇಳೆ ಮಹಿಳೆ ಅಡುಗೆ ಕೆಲಸದವಳಾಗಿದ್ದು, 45 ವರ್ಷದ ಪ್ರಿಯಕರನೊಂದಿಗೆ ಆಶ್ರಮದಲ್ಲಿ ವಾಸಿಸುತ್ತಿರುವುದಾಗಿ, ಆಶ್ರಮವನ್ನು ನಡೆಸುತ್ತಿದ್ದ ಫಾದರ್ ಜೋಜಿ ಥಾಮಸ್ ಹೇಳಿಕೆ ನೀಡಿದ್ದು, ಅದರ ಅನ್ವಯ ಪೊಲೀಸರು ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. 

ಡಿಸೆಂಬರ್ 10ರಂದು ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ತಲೆಯ ಭಾಗಕ್ಕೆ ಹಿಂಭಾಗಕ್ಕೆ ಗಾಯವಾಗಿರುವುದು ಕಂಡುಬಂದಿದ್ದು, ಇದೀಗ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರಾವಳಿಯಲ್ಲಿ ಅತಿವೃಷ್ಟಿಯಿಂದ ಅಡಿಕೆ ಬೆಳೆಗೆ ರೋಗಬಾಧೆ: ಕೃಷಿಕರಿಗೆ ಡಬಲ್‌ ಹೊಡೆತ

ಎಸ್‌ಪಿಯನ್ನು ನಾಯಿಗೆ ಹೋಲಿಸಿದ ಆರೋಪ: ಬಿಜೆಪಿ ಶಾಸಕನಿಗೆ ಡವಡವ ‌

ಧರ್ಮದ ವಿಚಾರದಲ್ಲಿ ಹುಡುಗಾಟ ಸಹಿಸಲ್ಲ: ಡಾ.ಸಿ.ಎನ್.ಅಶ್ವತ್ಥನಾರಾಯಣ್

ಕೈ ವಕ್ತಾರ ಪವನ್ ಖೇರಾ ಪತ್ನಿಯಲ್ಲಿ ಎರಡು ವೋಟರ್ ಐಡಿ: ಬಿಜೆಪಿ ಆರೋಪ

ಸ್ವಾತಂತ್ರ್ಯ ದಿನಾಚರಣೆಯಂದು ಕೇರಳ ಶಾಲೆಯಲ್ಲಿ ಆರ್‌ಎಸ್‌ಎಸ್ ಗೀತೆ, ವಿವರಣೆ ಕೇಳಿದ ಸಚಿವರು

ಮುಂದಿನ ಸುದ್ದಿ
Show comments