Publish Date: Mon, 01 Feb 2021 (07:26 IST)
Updated Date: Mon, 01 Feb 2021 (07:27 IST)
ಲಕ್ನೋ : ಅಂಗಡಿಗೆ ವಸ್ತುಗಳನ್ನು ಖರೀದಿಸಲು ಬಂದ 14 ವರ್ಷದ ಹುಡುಗಿಯ ಮೇಲೆ ಅಂಗಡಿ ಮಾಲೀಕ ಹಾಗೂ ಆತನ ಮಗ ಮಾನಭಂಗ ಎಸಗಿದ ಘಟನೆ ಲಕ್ನೋ ನಡೆದಿದೆ.
ಹುಡುಗಿ ಅಂಗಡಿಯಿಂದ ಕೆಲವು ವಸ್ತುಗಳನ್ನು ಖರೀದಿಸಲು ಹೋಗಿದ್ದಾಳೆ. ಆ ವೇಳೆ ಅಂಗಡಿ ಮಾಲೀಕ ಹಾಗೂ ಆತನ ಮಗ ಸೇರಿ ಮಾನಭಂಗ ಎಸಗಿದ್ದಾರೆ. ಮತ್ತು ಬೇರೆಯವರಿಗೆ ತಿಳಿಸಿದರೆ ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಹುಡುಗಿಯ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಆಕೆಯನ್ನು ವೈದ್ಯರ ಬಳಿ ಕರೆದೊಯ್ಯದಿದ್ದು, ಅಲ್ಲಿ ಆಕೆ ಗರ್ಭಿಣಿ ಎಂದು ತಿಳಿದಾಗ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.