Publish Date: Mon, 25 Nov 2019 (09:18 IST)
Updated Date: Mon, 25 Nov 2019 (09:20 IST)
ನವದೆಹಲಿ : ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ ಬಿಜೆಪಿ ಹಾಗೂ ಅಜಿತ್ ಪವಾರ್ ಗೆ ಶರದ್ ಪವಾರ್ ಬೆಂಬಲ ನೀಡುತ್ತಾರೆ ಎಂಬ ವದಂತಿಗೆ ಇದೀಗ ಶರದ್ ಪವಾರ್ ತೆರೆ ಎಳೆದಿದ್ದಾರೆ.
ಅಜಿತ್ ಪವಾರ್ ಬಿಜೆಪಿ ಜೊತೆ ಕೈಜೋಡಿಸಿರುವುದಕ್ಕೆ ಶರದ್ ಪವಾರ್ ಅವರ ಬೆಂಬಲವಿತ್ತು ಎಂಬ ಟೀಕೆಗಳು ಕೇಳಿಬಂದಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಶರದ್ ಪವಾರ್ ಬಿಜೆಪಿ ಜೊತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶರದ್ ಪವಾರ್, ಶಿವಸೇನೆ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಎನ್ ಸಿಪಿ ಯಲ್ಲಿ ಸಂಪೂರ್ಣ ಸಹಮತವಿದೆ. ಅಜಿತ್ ಪವಾರ್ ಹೇಳಿಕೆಯು ತಪ್ಪಾಗಿದ್ದು, ಜನರಿಗೆ ಗೊಂದಲ ಮೂಡಿಸುವ ಉದ್ದೇಶ ಹೊಂದಿದೆ. ಬಿಜೆಪಿ ಜೊತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.