Publish Date: Mon, 25 Nov 2019 (09:14 IST)
Updated Date: Mon, 25 Nov 2019 (09:17 IST)
ಬೆಂಗಳೂರು : ಅನರ್ಹ ಶಾಸಕ ಎಂಟಿಬಿ ನಾಗರಾಜ್ ಪಕ್ಷ ಬಿಡಲು ಅಕ್ರಮ ದುಡ್ಡಿನ ಹೆದರಿಕೆ ಕಾರಣವೇ? ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಹೊಸಕೋಟೆಯಲ್ಲಿ ಚುನಾವಣಾ ಪ್ರಚಾರ ಮಾಡಿದ ಸಿದ್ದರಾಮಯ್ಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಎಂಟಿಬಿ 4 ಬಾರಿ ಪಕ್ಷ ಟಿಕೆಟ್ ನೀಡಿತ್ತು. ನಾನು ಮುಖ್ಯಮಂತ್ರಿಯಾಗಿದ್ದಾಗ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಿದ್ದೆ. ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಮಾಡಿದ್ದೆವು. ಇದರ ನಂತರವೂ ಪಕ್ಷ ಬಿಡಲು ಮುಂದಾಗಿದ್ದಾರೆ. ಅಂದರೆ ಇವರಿಗೆ ಅಕ್ರಮ ದುಡ್ಡಿನ ಹೆದರಿಕೆ ಇದೆಯಾ? ಎಂದು ಮತದಾರರು ಪ್ರಶ್ನಿಸಬೇಕು ಎಂದು ಹೇಳಿದ್ದಾರೆ.
ಎಂಟಿಬಿ ನಾಗರಾಜ್ ಬಳಿ ಪಕ್ಷ ಬಿಡುವ ಕಾರಣ ಕೇಳಿದ್ದಕ್ಕೆ ಶಾಸಕ ಸುಧಾಕರ್ ಗೆ ಪಕ್ಷ ಬಿಡುವುದಾಗಿ ಮಾತುಕೊಟ್ಟಿದ್ದೇನೆ ಎಂದಿದ್ದಾರೆ. ಇವರನ್ನು ಗೆಲ್ಲಿಸಿದ್ದು ಸುಧಾಕರೋ? ಅಥವಾ ಹೊಸಕೋಟೆಯ ಜನತೆಯೋ? ಎಂದು ಅವರು ಪ್ರಶ್ನಿಸಿದ್ದಾರೆ.