Publish Date: Fri, 22 Nov 2019 (11:45 IST)
Updated Date: Fri, 22 Nov 2019 (11:49 IST)
ಬೆಂಗಳೂರು : ತಮ್ಮನ್ನು ಪದೇ ಪದೇ ಏಕಾಂಗಿ ಎಂದು ಟೀಕಿಸುತ್ತಿರುವ ಬಿಜೆಪಿ ನಾಯಕರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಬಿಜೆಪಿಯವ್ರು ನನ್ನ ಮೇಲೆ ಮುಗಿಬೀಳ್ತಿರುವುದು ನೋಡಿದ್ರೆ. ನನ್ನನ್ನು ಟೀಕಿಸಿದವರಿಗೆ ಬಹುಮಾನ ನೀಡುವುದಾಗಿ ಮೋದಿ, ಅಮಿತ್ ಶಾ ಭರವಸೆ ನೀಡಿರುವ ಹಾಗೇ ಇದೆ. ನಾನು ಏಕಾಂಗಿಯಾಗಿದ್ದರೆ ಇವರಿಗ್ಯಾಕೆ ನನ್ನ ಬಗ್ಗೆ ಭಯ? ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.
ಏಕಾಂಗಿಯಾಗಿ ಹೋಗಿರುವ ಸದಾನಂದಗೌಡರನ್ನು ರಾಜ್ಯ ಬಿಜೆಪಿ ನಾಯಕರು ಗಂಭೀರವಾಗಿ ಸ್ವೀಕರಿಸುತ್ತಿಲ್ಲ. ಇದಕ್ಕಾಗಿ ಅವರು ತಮ್ಮ ಜೋಕ್ ಗಳಿಗೆ ತಾವೇ ನಕ್ಕು ರಾಜ್ಯದ ಜನರಿಗೆ ಮನರಂಜನೆಯನ್ನು ನೀಡುತ್ತಿದ್ದಾರೆ. ಮೊದಲು ಸಿಎಂ ಸ್ಥಾನದಿಂದ ನಂತರ ರೈಲ್ವೆ ಖಾತೆ , ಕಾನೂನು, ಅಂಕಿ-ಅಂಶ ಹೀಗೆ ಎಲ್ಲೆಡೆ ತಿರಸ್ಕೃತಗೊಂಡ ಡಿವಿಎಸ್ ಈಗ ಬಿಜೆಪಿಯಲ್ಲಿ ಗೊಬ್ಬರವಾಗಿ ಹೋಗಿದ್ದಾರೆ. ಹೀಗಾಗಿ ಅವರು ಹತಾಶರಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಸದಾನಂದ ಗೌಡರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.