Publish Date: Tue, 22 Dec 2020 (07:09 IST)
Updated Date: Tue, 22 Dec 2020 (07:12 IST)
ಬರೇಲಿ : ಮಹಿಳೆಗೆ ಆನ್ ಲೈನ್ ನಲ್ಲಿ ಪರಿಚಯರಾದ ಯುವಕರಿಬ್ಬರು ಕೆಲಸ ಕೊಡಿಸುವ ನೆಪದಲ್ಲಿ ಕರೆದು ಆಕೆಯ ಮೇಲೆ ಮಾನಭಂಗ ಎಸಗಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ನಡೆದಿದೆ.
ಪದವೀಧರಳಾದ ಮಹಿಳೆಗೆ ಸೋಶಿಯಲ್ ಮೀಡಿಯಾದ ಮೂಲಕ ಇಬ್ಬರು ಯುವಕರ ಪರಿಚಯವಾಗಿದೆ. ಅದರಲ್ಲಿ ಒಬ್ಬ ಆನ್ ಲೈನ್ ರಫ್ತು ಕಂಪೆನಿಯ ವ್ಯವಸ್ಥಾಪಕನೆಂದು ಪರಿಚಯಿಸಿಕೊಂಡು ಕೆಲಸ ನೀಡುವುದಾಗಿ ತಿಳಿಸಿ ಸಂದರ್ಶನಕ್ಕೆ ಬರುವಂತೆ ತಿಳಿಸಿದ್ದಾನೆ. ಬಳಿಕ ಅವರ ಬಳಿ ಬಂದ ಮಹಿಳೆಯನ್ನು ಹೋಟೆಲ್ ವೊಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನಿದ್ರೆ ಬರುವ ಮಾತ್ರೆ ನೀಡಿ ಅವಳ ಮೇಲೆ ಮಾನಭಂಗ ಎಸಗಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಮಹಿಳೆ ಪೊಲೀಸರ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.