Publish Date: Fri, 26 Feb 2021 (11:12 IST)
Updated Date: Fri, 26 Feb 2021 (11:14 IST)
ಗ್ರೇಟರ್ ನೊಯ್ಡಾ : 28 ವರ್ಷದ ಎಂಜಿನಿಯರ್ ತನ್ನ 25 ವರ್ಷದ ಗರ್ಭಿಣಿ ಹೆಂಡತಿಯನ್ನು ಕೊಲೆ ಮಾಡಿ ಬಳಿಕ 2 ದಿನಗಳ ಕಾಲ ಆಕೆಯ ದೇಹದ ಬಳಿ ಕುಳಿತುಕೊಂಡ ಘಟನೆ ಉತ್ತರಪ್ರದೇಶದ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ.
ಆರೋಪಿ ಹಾಗೂ ಮೃತ ಮಹಿಳೆ 10 ತಿಂಗಳ ಹಿಂದೆ ಮದುವೆಯಾಗಿದ್ದು, ಆಕೆ 2 ತಿಂಗಳ ಗರ್ಭಿಣಿಯಾಗಿದ್ದಳು. ಆದರೆ ಆರೋಪಿ ಮನೆಗೆ ಬಂದಾಗ ಆಕೆಯ ಇನ್ನೊಬ್ಬ ವ್ಯಕ್ತಿಯ ಜೊತೆಗಿರುವುದನ್ನು ಕಂಡುಕೊಂಡರು. ಇದರಿಂದ ಅವರಿಬ್ಬರ ನಡುವೆ ಜಗಳವಾಗಿದ್ದು, ಆರೋಪಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. 2 ದಿನಗಳ ಬಳಿಕ ಪೊಲೀಸರ ಬಳಿಕ ಹೋಗಿ ಕೊಲೆ ಮಾಡಿದ ಮಾಹಿತಿ ನೀಡಿ ಶರಣಾಗಿದ್ದಾನೆ.