Publish Date: Fri, 26 Feb 2021 (10:09 IST)
Updated Date: Fri, 26 Feb 2021 (10:11 IST)
ಗೋಂಡಾ : ಶಾಲೆಯಿಂದ ಮನೆಗೆ ಮರಳುತ್ತಿದ್ದ 15 ವರ್ಷದ ಹುಡುಗಿಯ ಮೇಲೆ ನಾಲ್ವರು ಸೇರಿ ಸಾಮೂಹಿಕ ಮಾನಭಂಗ ಎಸಗಿ ಚಾಕುವಿನಿಂದ ಇರಿದ ಘಟನೆ ಗೊಂಡಾ ಹಳ್ಳಿಯಲ್ಲಿ ನಡೆದಿದೆ.
ಸಂತ್ರಸ್ತೆ ಶಾಲೆಯಿಂದ ಬೈಸಿಕಲ್ ನಲ್ಲಿ ಹಿಂದಿರುಗುತ್ತಿದ್ದಾಗ ನಾಲ್ಕು ಮಂದಿ ಆಕೆಯನ್ನು ಜಮೀನಿಗೆ ಎಳೆದುಕೊಂಡು ಹೋಗಿ ಮಾನಭಂಗ ಎಸಗಿದ್ದಾರೆ. ಇದಕ್ಕೆ ಆಕೆ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಆಕೆಗೆ ಚಾಕುವಿನಿಂದ ಇರಿದಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಆರೋಪಿಗೆ ಸಂತ್ರಸ್ತೆಯ ಕುಟುಂಬದವರ ಜೊತೆ ಹಳೆಯ ದ್ವೇಷವಿದೆ ಎನ್ನಲಾಗಿದೆ.