Publish Date: Mon, 07 Sep 2020 (10:24 IST)
Updated Date: Mon, 07 Sep 2020 (10:26 IST)
ಮೀರತ್ : ಮಾನಭಂಗಕ್ಕೊಳಗಾದ 17 ವರ್ಷದ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಯುವತಿಯನ್ನು ಮಾನಭಂಗ ಮಾಡಿದ ಪಾಪಿ ಅದನ್ನು ಚಿತ್ರಿಸಿಕೊಂಡು ಬೆದರಿಕೆ ಹಾಕಿದ. ಆದರೆ ಯುವತಿ ಇದಕ್ಕೆ ಹೆದರದ ಕಾರಣ ಮಾನಭಂಗ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ. ಇದರಿಂದ ನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಬಗ್ಗೆ ಯುವತಿ ಕುಟುಂಬದವರು ದೂರು ದಾಖಲಿಸಿದ ಹಿನ್ನಲೆಯಲ್ಲಿ ಆರೋಪಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.