Select Your Language

Notifications

webdunia
webdunia
webdunia
webdunia

ಮೊಬೈಲ್ ಡೇಟಾ ಖಾಲಿ ಮಾಡಿದ್ದಕ್ಕೆ ತಮ್ಮನಿಗೆ ಅಣ್ಣ ಮಾಡಿದ್ದೇನು?

ಮೊಬೈಲ್ ಡೇಟಾ ಖಾಲಿ ಮಾಡಿದ್ದಕ್ಕೆ ತಮ್ಮನಿಗೆ ಅಣ್ಣ ಮಾಡಿದ್ದೇನು?
ಜೋಧ್ ಪುರ , ಶನಿವಾರ, 21 ನವೆಂಬರ್ 2020 (07:40 IST)
ಜೋಧ್ ಪುರ : ಮೊಬೈಲ್ ನೆಟ್ ಖಾಲಿ ಮಾಡಿದ್ದಕ್ಕಾಗಿ 23 ವರ್ಷದ ಯುವಕ ತನ್ನ ಕಿರಿಯ ಸಹೋದರನನ್ನು ಚಾಕುವಿನಿಂದ ಇರಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಸಹೋದರನ ಮೊಬೈಲ್ ನಲ್ಲಿರುವ ಇಂಟರ್ ನೆಟ್ ಡೇಟಾವನ್ನು ಕಿರಿಯ ಸಹೋದರ ಬಳಸಿದ್ದ ಕಾರಣ ಅದು ಖಾಲಿಯಾಗಿದೆ. ಇದನ್ನು ತಿಳಿದ ಯುವಕ ಕೋಪಗೊಂಡು ಆತನನ್ನು ಮನೆಯ ಮಹಡಿಯ ಮೇಲೆ ಕರೆದುಕೊಂಡು ಹೋಗಿ ಗದರಿಸಿದ್ದಾನೆ. ಇದರಿಂದ ಇಬ್ಬರ ನಡುವೆ ಜಗಳ ನಡೆದು ಕೋಪಗೊಂಡ ಯುವಕ ಸಹೋದರನ ಎದೆಗೆ ಚಾಕುವಿನಿಂದ 4 ಬಾರಿ ಚುಚ್ಚಿ ಓಡಿಹೋಗಿದ್ದಾನೆ. ರಕ್ತ ಸ್ರಾವದಲ್ಲಿ ಬಿದ್ದ ಹುಡುಗನನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ಪೊಲೀಸರು ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ, ಬಳಿಕ ಆತನನ್ನು ರೈಲ್ವೆ ನಿಲ್ದಾಣದ ಬಳಿ ಬಂಧಿಸಲಾಗಿದೆ ಎನ್ನಲಾಗಿದೆ.

 
 

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನೊಂದಿಗೆ ವಾಟ್ಸ್ ಆ್ಯಪ್ ಚಾಟ್ ಮಾಡುತ್ತಿದ್ದ ಹುಡುಗಿಗೆ ಸಹೋದರ ಮಾಡಿದ್ದೇನು ಗೊತ್ತಾ?