Select Your Language

Notifications

webdunia
webdunia
webdunia
webdunia

ಗುಜರಾತ್‌ನಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳೇನು?

ಗುಜರಾತ್‌ನಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳೇನು?
ನವದೆಹಲಿ , ಗುರುವಾರ, 8 ಡಿಸೆಂಬರ್ 2022 (11:50 IST)
ನವದೆಹಲಿ : ಸತತ 7ನೇ ಬಾರಿ ಅಧಿಕಾರಕ್ಕೆ ಏರುವ ಮೂಲಕ ಗುಜರಾತ್ನಲ್ಲಿ ಬಿಜೆಪಿ ಐತಿಹಾಸಿಕ ಸಾಧನೆ ಮಾಡಿದೆ. ಈ ಫಲಿತಾಂಶ ಬರಲು ಮೋದಿ, ಶಾ ಜೋಡಿ ಬಹಳ ಶ್ರಮ ಪಟ್ಟಿತ್ತು.

2024ರ ಲೋಕಸಭಾ ಚುನಾವಣೆಯನ್ನು ಗೆಲ್ಲಬೇಕಾದರೆ ತವರು ರಾಜ್ಯವನ್ನು ಗೆಲ್ಲಲ್ಲೇಬೇಕಿತ್ತು. ಈ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಚುನಾವಣೆಗೂ ಒಂದು ವರ್ಷದ ಮೊದಲೇ ಪ್ಲಾನ್ ಮಾಡಿದ್ದರು.

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯ ಮಾಹಿತಿ ತಿಳಿದ ಮೋದಿ, ಶಾ ಜೋಡಿ ಕಳೆದ ವರ್ಷವೇ ಸಂಪುಟ ಪುನರ್ ರಚನೆ ಮಾಡಿದ್ದರು. ಹಿರಿಯರಿಗೆ ಕೊಕ್ ನೀಡಿ ‘ಯಂಗ್ ಕ್ಯಾಬಿನೆಟ್’ ರಚನೆ ಮಾಡಿದ್ದರು.

ಹಿರಿಯ ನಾಯಕರಾದ ನಿತೀನ್ ಪಟೇಲ್, ವಿಜಯ್ ರೂಪಾನಿ ಸೇರಿದಂತೆ ಎಂಟು ಹಿರಿಯರನ್ನು ಕ್ಯಾಬಿನೆಟ್ನಿಂದ ತೆಗೆದು ಆದಿವಾಸಿ, ಒಬಿಸಿ, ಪಾಟಿದಾರ್ ಸಮುದಾಯದ ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗಿತ್ತು.

ಬಹಳ ಮುಖ್ಯವಾಗಿ 2017ರ ಚುನಾವಣೆಯಲ್ಲಿ ಬಿಜೆಪಿ 20 ಕ್ಷೇತ್ರಗಳಲ್ಲಿ ಬಹಳ ಕಡಿಮೆ ಮತಗಳ ಅಂತರದಿಂದ ಸೋತಿತ್ತು. ಈ ಕ್ಷೇತ್ರಗಳಲ್ಲಿ ಈ ಬಾರಿ ಜಯ ಸಾಧಿಸಲೇಬೇಕೆಂದು ಪಕ್ಷ ಸಂಘಟನೆ ಮಾಡಿದ್ದು ಫಲ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲಗಲು ಬೆಡ್ರೂಂಗಳನ್ನೂ ಸಿದ್ಧಪಡಿಸಿದ ಮಸ್ಕ್?