Select Your Language

Notifications

webdunia
webdunia
webdunia
webdunia

ಪ್ರಧಾನಿ ನಿವಾಸಕ್ಕೆ ಭೇಟಿ ಕೊಟ್ಟ ಆಕಾಂಕ್ಷಿಗಳ್ಯಾರು?

ಪ್ರಧಾನಿ ನಿವಾಸಕ್ಕೆ ಭೇಟಿ ಕೊಟ್ಟ ಆಕಾಂಕ್ಷಿಗಳ್ಯಾರು?
ನವ ದೆಹಲಿ , ಬುಧವಾರ, 7 ಜುಲೈ 2021 (18:21 IST)
ನವ ದೆಹಲಿ : ಕೇಂದ್ರ ಸಂಪುಟ ವಿಸ್ತರಣೆಯ ವಾಸನೆ ಬಡಿಯುತ್ತಿದ್ದಂತೆ ಹಿರಿಯ, ಕಿರಿಯ, ಪ್ರಭಾವಿ ಬಿಜೆಪಿ ನಾಯಕರುಗಳೆಲ್ಲ ಸಚಿವಗಿರಿಗೆ ತೆರೆಮರೆಯಲ್ಲೇ ಲಾಭ ನಡೆಸುತ್ತಿದ್ದು. ಗುಣಾಕಾರ, ಭಾಗಕಾರಗಳನ್ನೆಲ್ಲಾ ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ವಲಸೆ ಬಂದ ನಾಯಕರುಗಳು ಸಹ ಹಿರಿ ತಲೆಗಳನ್ನು ಹಿಂದಿಕ್ಕಿ ತಾವು ಹೇಗೆ ಸ್ಥಾನ ಗಿಟ್ಟಿಸಿಕೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.
























ಬುಧವಾರ ಮಧ್ಯಾಹ್ನದ ಹೊತ್ತಿಗೆ ಕೇಸರಿ ಪಾಳಯದ ಒಂದಷ್ಟು ಜನ ನೇರವಾಗಿ ಪ್ರಧಾನಿ ಮೋದಿಯವರ ಮನೆಗೆ ಹೊಕ್ಕಿದ್ದಾರೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ, ಭಿವಾಂಡಿ ಲೋಕಸಭಾ ಸಂಸದ ಕಪಿಲ್ ಪಾಟೀಲ್, ಬಿಜೆಪಿಯ ಉತ್ತರ ಪ್ರದೇಶದ ಅನುಪ್ರಿಯಾ ಪಟೇಲ್, ಕಾಂಗ್ರೆಸ್ಸಿನಿಂದ ಬಿಜೆಪಿಗೆ ಜಿಗಿದಿರುವ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ, ಉತ್ತರಾಖಂಡದ ಅಜಯ್ ಭಟ್ ಮತ್ತು ಕೇಸರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕ್ಯಾಬಿನೆಟ್ ವಿಸ್ತರಣೆಗೆ ಮುನ್ನ ನರೇಂದ್ರ ಮೋದಿಯವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಇವರಲ್ಲದೆ, ಸರ್ಬಾನಂದ ಸೋನೊವಾಲ್, ಭೂಪೇಂದರ್ ಯಾದವ್, ಅನುರಾಗ್ ಠಾಕೂರ್, ಮೀನಾಕ್ಷಿ ಲೆಖಿ, ಶೋಭಾ ಕರಂದ್ಲಾಜೆ, ಸುನೀತಾ ದುಗ್ಗ, ಪ್ರೀತಮ್ ಮುಂಡೆ, ಜಿ ಕಿಶನ್ ರೆಡ್ಡಿ, ಆರ್ಸಿಪಿ ಸಿಂಗ್, ಪಾರಶೋತ್ತಮ ರೂಪಾಲ ಮತ್ತು ಸಂತನು ಠಾಕೂರ್ ಸಹ  ಲೋಕ್ ಕಲ್ಯಾಣ ಮಾರ್ಗದ ನಂ 7ರ ಮೋದಿಯವರ ಅಧಿಕೃತ ನಿವಾಸದಲ್ಲಿ ಬೀಡು ಬಿಟ್ಟಿದ್ದಾರೆ.
ಮೋದಿಯವರ ನಿವಾಸದಿಂದ ಕೇಳಿ ಬಂದಿರುವ ಒಂದು ಕುತೂಹಲಕಾರಿ ಹೆಸರು ಎಂದರೆ ದಿವಂಗತ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಸಹೋದರ ಪಶುಪತಿ ಕುಮಾರ್ ಪರಾಸ್, ಇತ್ತೀಚೆಗೆ ಇವರ ಮತ್ತು ರಾಮ್ ವಿಲಾಸ್ ಪುತ್ರ ಚಿರಾಗ್ ಪಾಸ್ವಾನ್ ಅವರ ಕೌಂಟುಬಿಕ ಕಲಹ ತಾರಕಕ್ಕೇರಿತ್ತು.
ನಮ್ಮ ಪಕ್ಷದ  ಐದು ಸಂಸದರನ್ನು ಅಮಾನತುಗೊಳಿಸಿದ ಬಗ್ಗೆ ತಾನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದೇನೆ ಮತ್ತು ಪಕ್ಷದ ಕೋಟಾದಲ್ಲಿ ನನ್ನ ಚಿಕ್ಕಪ್ಪನನ್ನು ಸೇರಿಸಿಕೊಂಡರೆ ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದು ರಾಮ್ ವಿಲಾಸ್ ಅವರ ಪುತ್ರ ಮತ್ತು ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಮುಖ್ಯಸ್ಥ ಚಿರಾಗ್ ಮಂಗಳವಾರ ಎಚ್ಚರಿಕೆ ನೀಡಿದ್ದು, ಮುಂದೇನಾಗುತ್ತದೆ ಎಂಬುದನ್ನು ನೋಡಬೇಕಿದೆ.
ಕ್ಯಾಬಿನೆಟ್ ವಿಸ್ತರಣೆಯ ಸುಳಿವು ಗೊತ್ತಾಗುತ್ತಿದ್ದಂತೆ ಸೋಮವಾರವೇ ಹೊಸ ಬಟ್ಟೆಗಳ ಶಾಪಿಂಗ್ ಮಾಡಿದ್ದಾರೆ ಪರಾಸ್. ಮೋದಿಯವರ ತಂಡಕ್ಕೆ ಸೇರಲು ನಿಮಗೇನಾದರೂ “ಕರೆ” ಬಂದಿದ್ಯ ಎನ್ನುವ ಸುದ್ದಿಗಾರರ ಪ್ರಶ್ನೆಗೆ, ರಹಸ್ಯ ರಹಸ್ಯವಾಗಿಯೇ ಇರಲಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ತನ್ನ ಅಣ್ಣನ ಮಗನಾದ ಚಿರಾಗ್ ವಿರುದ್ಧ ದಂಗೆಯನ್ನು ಮುನ್ನಡೆಸಿದ್ದೇ ಪರಾಸ್, ಇವರಿಗೆ ಕೇಂದ್ರದಲ್ಲಿ ಕ್ಯಾಬಿನೆಟ್ ಸ್ಥಾನದ ಭರವಸೆ ಇದೆ ಎಂಬುದು ಅನೇಕ ಪರಿಣಿತರ ಅಭಿಪ್ರಾಯ.ಪ್ರಧಾನಿ ಮೋದಿ ಅವರು ತಮ್ಮ ಮಂತ್ರಿ ಮಂಡಲದಲ್ಲಿ ಯಾರಿರಬೇಕು, ಯಾರಿರಬಾರದು ಎನ್ನುವ ಮೊದಲ ಪಟ್ಟಿಯನ್ನು ಮಂಗಳವಾರ  ಸಂಜೆ 6 ರ ಸುಮಾರಿಗೆ ಕೊಡಬಹುದು   ಎಂದು ಹೇಳಲಾಗುತ್ತಿದೆ.  ಕೊರೋನಾ ಬಿಕ್ಕಟ್ಟಿನಿಂದ ಉಂಟಾಗಿರುವ ರಾಜಕೀಯ ಮತ್ತು ಆಡಳಿತದ ಸವಾಲುಗಳ ಮೇಲೆ ಗಮನ ಹರಿಸುವುದು ಮೋದಿ ಅವರ ಮುಂದಿರುವ ಸವಾಲಾಗಿದೆ ಆದ ಕಾರಣ ಸಮರ್ಥ ಪಡೆ ಕಟ್ಟಲು ಹೊರಟಿದ್ದಾರೆ ಎನ್ನುವ ಮಾತಿದೆ.
ಬಿಜೆಪಿ ನಾಯಕರುಗಳಾದ ಸೋನಾವಾಲ, ಸಿಂಧಿಯಾ ಮತ್ತು ರಾಣೆ ಅವರುಗಳು ಸಚಿವ ಸಂಪುಟ್ಟಕ್ಕೆ ಸೇರುವ ಸಾಧ್ಯತೆಗಳು ಇರುವ ಕಾರದಿಂದ ಸೋಮವಾರ ಸಂಜೆಯೇ ದೆಹಲಿ ತಲುಪಿದ್ದಾರೆ.
ಕೋವಿಡ್ ಕಾರಣದಿಂದ ಪ್ರಧಾನಿಯವರ ನಿವಾಸಕ್ಕೆ ಭೇಟಿ ನೀಡುವವರ ಸಂಖ್ಯೆಯನ್ನುಮಿತಿಗೊಳಿಸಲಾಗಿದೆ.  ನಿವಾಸಕ್ಕೆ ಬರಲೇ ಬೇಕು ಎನ್ನುವವರು 24 ಗಂಟೆಗೂ ಮುಂಚೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ಬರಬೇಕು ಎನ್ನುವ ನಿಯಮ ರೂಪಿಸಲಾಗಿದೆ.
ದಿ ಪ್ರಿಂಟ್ ವರದಿಯ ಪ್ರಕಾರ ಕೋವಿಡ್ ಮುಂಜಾಗ್ರತೆಯನ್ನು ಕಠಿಣವಾಗಿ ಪ್ರಧಾನಿ ನಿವಾಸದಲ್ಲಿ ಪಾಲಿಸಲಾಗುತ್ತಿದ್ದು, ಪ್ರತಿ ಹಂತದಲ್ಲೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪ್ರಧಾನಿಯವರೊಂದಿಗೆ ಮಾತನಾಡಲು ಸುಮಾರು 15- 20 ಅಡಿಗಳ ದೂರ ನಿಂತುಕೊಂಡೆ ಮಾತನಾಡಬೇಕು ಎನ್ನುವ ನಿಯಮ ಪಾಲಿಸಲಾಗುತ್ತಿದೆ ಎನ್ನುವ ಮಾಹಿತಿ ಇದೆ ಎಂದು ಬಲ್ಲ ಮೂಲಗಳು ಮಾಹಿತಿಯನ್ನು ನೀಡಿವೆ.
ಇಂದಿನ ಸಂಚಿಕೆಯಲ್ಲಿ ಮೊದಲಿಗೆ ನೀರು ತುಂಬಿದ ಬಲೂನ್ ಅನ್ನು ದಾರಕ್ಕೆ ಕಟ್ಟಿ ಸ್ಪರ್ಧಿಗಳನ್ನು ಚೇರ್ಗಳ ಮೇಲೆ ವೃತ್ತಾಕಾರದಲ್ಲಿ ಕೂರಿಸಲಾಯಿತು. ನಂತರ ಸ್ಪರ್ಧಿಗಳ ಕಣ್ಣಿಗೆ ಬಟ್ಟೆ ಕಟ್ಟಿ ಕೂರಿಸಿ, ನೀರು ತುಂಬಿದ ಬಲೂನ್ ತಲೆಗೆ ತಾಗದಂತೆ ನೋಡಿಕೊಳ್ಳಿ ಎಂದು ಹೇಳಲಾಯಿತು. ಈ ಟಾಸ್ಕ್ನಲ್ಲಿ ಗೆದ್ದವರಿಗೆ 10 ಸಾವಿರ ಹಣ ಸಿಗುತ್ತದೆ ಎನ್ನಲಾಗಿತ್ತು.
ಈ ಟಾಸ್ಕ್ನಲ್ಲಿ ದಿವ್ಯಾ ಉರುಡುಗ ಸ್ಟ್ರಾಟೆಜಿ ಮಾಡುವ ಮೂಲಕ ಅರವಿಂದ್ ಅವರನ್ನು ಗೆಲ್ಲುವಂತೆ ಮಾಡಿದ್ದಾರೆ ಎಂದು ಪ್ರಶಾಂತ್ ಸಂಬರಗಿ ಆರೋಪಿಸುತ್ತಿದ್ದಾರೆ. ನೀರು ತುಂಬಿದ ಬಲೂನ್ ಅರವಿಂದ್ ಅವರ ಬಳಿ ಹೋಗಿದ್ದು ಒಂದೆರಡು ಸಲ ಇರಬಹುದು. ಇದು ದಿವ್ಯಾ ಮಾಡಿದ ಪ್ಲಾನ್ಎಂದು ಪ್ರಶಾಂತ್ ಸಂಬರಗಿ ಚಂದ್ರಚೂಡ ಅವರ ಬಳಿ ಹೇಳಿಕೊಂಡಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಸದಾನಂದ ಗೌಡರಿಗೆ ರಾಜ್ಯದಲ್ಲಿ ದೊಡ್ಡ ಸ್ಥಾನ: ಡಿಸಿಎಂ ಅಶ್ವಥ್ ನಾರಾಯಣ್ ಸುಳಿವು