Publish Date: Sun, 17 Dec 2017 (11:40 IST)
Updated Date: Sun, 17 Dec 2017 (11:49 IST)
ಮುಂಬೈ: ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಎಲ್ಲರೂ ಎದುರುನೋಡುತ್ತಿರುವ ವೇಳೆ ಬಿಜೆಪಿ ರಾಜ್ಯಸಭಾ ಸದಸ್ಯ ಸಂಜಯ್ ಕಾಕಡೆ ಅವರು 'ನಮ್ಮ ಪಕ್ಷ ಸೋಲು ಅನುಭವಿಸಲಿದೆ' ಎಂದು ಹೀಗೊಂದು ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
ಸಂಜಯ್ ಕಾಕಡೆ ಪ್ರಕಾರ 'ಆಡಳಿತ ವಿರೋಧಿ ಅಲೆ ಕೆಲಸ ಮಾಡಲಿದ್ದು, ಪಕ್ಷ ಸೋಲುತ್ತದೆ. ಮಾತ್ರವಲ್ಲದೆ ಮುಸ್ಲಿಮರು ನಮ್ಮ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಇದರ ಪರಿಣಾಮ ಬೀರಲಿದೆ' ಎಂದು ಸಂಜಯ್ ಕಾಕಡೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
'ನರೇಂದ್ರ ಮೋದಿ ಅವರು ಪ್ರಧಾನಿಯಾದಾಗಿನಿಂದ ಗುಜರಾತ್ ಸಮಸ್ಯೆಗಳ ಬಗ್ಗೆ ಗಮನವನ್ನೇ ಹರಿಸಲಿಲ್ಲ. ಬಿಜೆಪಿ ಸರಿಯಾಗಿ ಚುನಾವಣಾ ಪ್ರಚಾರವನ್ನೂ ಮಾಡಲಿಲ್ಲ, ಹೀಗಾಗಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ' ಎಂದೂ ಕಾಕಡೆ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ