Select Your Language

Notifications

webdunia
webdunia
webdunia
webdunia

ಬಾಬಾ ಸಿದ್ದೀಕಿ ಹತ್ಯೆ ಹಂತಕರನ್ನು ಗಲ್ಲಿಗೇರಿಸುತ್ತೇವೆ: ಸಿಎಂ ಏಕನಾಥ ಶಿಂದೆ

Baba Siddik No More, Maharastra Chief Minister Ekanath Sindhe, Accused Mohammad Zisan

Sampriya

ಮುಂಬೈ , ಮಂಗಳವಾರ, 15 ಅಕ್ಟೋಬರ್ 2024 (15:31 IST)
Photo Courtesy X
ಮುಂಬೈ: ಈಚೆಗೆ ಗುಂಡೇಟಿಗೆ ಬಲಿಯಾದ ಮಾಜಿ ಸಚಿವ ಬಾಬಾ ಸಿದ್ದೀಕಿ (66) ಹತ್ಯೆ ಪ್ರಕರಣದ ಹಂತಕರನ್ನು ಗಲ್ಲಿಗೇರಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪಂಜಾಬ್‌ನ ಜಲಂಧರ್‌ನ ನಿವಾಸಿ ಮೊಹಮ್ಮದ್‌ ಜಿಶನ್‌ ಅಖ್ತರ್‌ ಪತ್ತೆ ಶೋಧ ನಡೆಸಲಾಗುತ್ತಿದೆ. ಇತನ ವಿರುದ್ಧ ಪಂಜಾಬ್ ಮತ್ತು ಹರಿಯಾಣದಲ್ಲಿ ಸುಮಾರು ಒಂಬತ್ತು ಪ್ರಕರಣಗಳು ದಾಖಲಾಗಿದ್ದವು.

ಇನ್ನೂ ಸಿದ್ದೀಕಿ ಹತ್ಯೆ ಪ್ರಕರಣದಲ್ಲಿ 6ಮಂದಿ ಪಾತ್ರವಿರುವುದು ಬೆಳಕಿಗೆ ಬಂದಿದೆ. ಮೂವರು ವಶಕ್ಕೆ ಪಡೆಯಲಾಗಿದೆ. ಯಾವುದೇ ಕಾರಣಕ್ಕೂ ಈ ಹತ್ಯೆಯ ಹಿಂದೆ ಇರುವ ಹಂತಕರನ್ನು ಸುಮ್ಮನೇ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ಪೊಲೀಸರು ಈಗಾಗಲೇ ಹರಿಯಾಣದ ನಿವಾಸಿ ಗುರ್ಮೈಲ್‌ ಬಲ್ಜಿತ್‌ ಸಿಂಗ್‌ (23), ಉತ್ತರ ಪ್ರದೇಶದ ಧರ್ಮರಾಜ್‌ ರಾಜೇಶ್‌ ಕಶ್ಯಪ್‌ (19) ಮತ್ತು ಪುಣೆಯ ಸಹ ಸಂಚುಕೋರ ಪ್ರವೀಣ್‌ ಲೋನ್ಕರ್‌ ಅವರನ್ನು ಬಂಧಿಸಿದ್ದಾರೆ.  ಶಂಕಿತ ಶೂಟರ್‌ ಶಿವಕುಮಾರ್‌ ಗೌತಮ್‌ಗಾಗಿ ಮುಂಬೈ ಪೊಲೀಸರು ಮಧ್ಯ ಪ್ರದೇಶದ ಉಜ್ಜಯಿನಿ ಮತ್ತು ಖಾಂಡ್ವಾ ಜಿಲ್ಲೆಗಳ ಪೂಜಾ ಸ್ಥಳಗಳ ಬಳಿ ತೀವ್ರ ಶೋಧ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯವರು ಹಿಂದೂ ಸಂಘಟನೆಗಳ ಮೇಲಿನ ಕೇಸ್ ವಾಪಸ್ ಪಡೆದಿಲ್ವಾ: ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು