Select Your Language

Notifications

webdunia
webdunia
webdunia
webdunia

ಬಾಲ್ಯಸ್ನೇಹಿತರು ಕಳ್ಳ- ನ್ಯಾಯಾಧೀಶರಾಗಿ ಎದುರುಬದುರಾದಾಗ....ಏನಾಯ್ತು? (ವಿಡಿಯೋ)

ಬಾಲ್ಯಸ್ನೇಹಿತರು ಕಳ್ಳ- ನ್ಯಾಯಾಧೀಶರಾಗಿ ಎದುರುಬದುರಾದಾಗ....ಏನಾಯ್ತು? (ವಿಡಿಯೋ)
ಫ್ಲಾರಿಡಾ , ಸೋಮವಾರ, 20 ಫೆಬ್ರವರಿ 2017 (14:31 IST)
ಅದೇನೋ ಹೇಳ್ತಾರಲ್ಲ ಭೂಮಿ ಗುಂಡಗಿದೆ. ಈ ಹಿಂದೆ ನಮ್ಮ ಜೀವನದಲ್ಲಿದ್ದವರು ಮುಂದು ಭೇಟಿಯಾಗಬಹುದು ಎನ್ನುತ್ತಾರೆ. ನಮ್ಮೆಲ್ಲರ ಜೀವನದಲ್ಲೂ ಹೀಗಾಗಿರುತ್ತದೆ. ಕೆಲ ಅನಿರೀಕ್ಷಿತ ಭೇಟಿ ನಮಗೆ ಆಶ್ಚರ್ಯದ ಜತೆಗೆ ಸಂತೋಷವನ್ನು ತರುತ್ತವೆ. ಕೆಲವು ಬೇಸರ, ನೋವನ್ನುಂಟು ಮಾಡಬಹುದು. ಅವೆಲ್ಲವೂ ಸಮಯ, ಸಂದರ್ಭ, ಸನ್ನಿವೇಶಗಳನ್ನು ಅವಲಂಬಿಸಿರುತ್ತವೆ. ಈ ಕಥೆಯನ್ನು ಓದಿ. ತನ್ನ ಬಾಲ್ಯದ ಗೆಳತಿಯನ್ನು ಮೂರ್ನಾಲ್ಕು ದಶಕಗಳ ಬಳಿಕ ಭೇಟಿಯಾದ ವ್ಯಕ್ತಿಯೊಬ್ಬ ಸಂತೋಷ, ನೋವು, ಅಪಮಾನಗಳ ಸಂದಿಗ್ಧತೆಯಲ್ಲಿ ಸಿಲುಕಿ ಒದ್ದಾಡಿದ ಪ್ರಸಂಗವಿದು.
ಫ್ಲಾರಿಡಾದ ಮಿಯಾಮಿ ಡೇಡ್‘ನಲ್ಲಿ ನಡೆದ ಪ್ರಸಂಗವಿದು. ಆದರೆ, ಇಲ್ಲಿನ ವಿಚಿತ್ರ  ಸಂದರ್ಭ ಹೇಗಿತ್ತೆಂದರೆ, ಬಾಲ್ಯ ಸ್ನೇಹಿತೆ ಜಡ್ಜ್ ಸ್ಥಾನದಲ್ಲಿ ಕುಳಿತಿದ್ದರೆ, ಈತ ಕಳ್ಳತನ ಆರೋಪದಲ್ಲಿ ಕಟಕಟೆಯಲ್ಲಿ ನಿಂತಿದ್ದ.
ಕದ್ದ ಕಾರಿನಲ್ಲಿ ತಪ್ಪಿಸಿಕೊಂಡು ಓಡುತ್ತಿದ್ದ ಅರ್ಥರ್ ಬೂತ್ ಎಂಬ 49 ವರ್ಷದ ಕಳ್ಳನನ್ನ ಬೆನ್ನತ್ತಿ ಹಿಡಿದಿದ್ದ ಪೊಲೀಸರು, ನ್ಯಾಯಾಧೀಶೆ ಮಿಂಡಿ ಗ್ಲೇಸರ್ ಮುಂದೆ ಹಾಜರುಪಡಿಸಿದ್ದರು. ಆರೋಪಿಯ ಮುಖವನ್ನ ಎರಡು ಬಾರಿ ದಿಟ್ಟಿಸಿ ನೋಡಿದ ನ್ಯಾಯಾಧೀಶೆಗೆ ತಮ್ಮ ಬಾಲ್ಯ ನೆನಪಿಗೆ ಬಂದಿತ್ತು.
 
ತಮ್ಮ ಬಾಲ್ಯದ ಊರನ್ನ ಜ್ಞಾಪಿಸಿಕೊಂಡ ನ್ಯಾಯಾಧೀಶೆ, ನೀನು ನೌಟಲಿಯಸ್‌ಗೆ ಹೋಗಬೇಕೆಂದಿದ್ದೀಯಾ ಎಂದು ಪ್ರಶ್ನಿಸಿದರು. ನ್ಯಾಯಾಧೀಶೆಯ ಪ್ರಶ್ನೆ ಕಿವಿಗೆ ಬೀಳುತ್ತಲೇ ಕಳ್ಳನಿಗೂ ಆಕೆ ತನ್ನ ಬಾಲ್ಯ ಸ್ನೇಹಿತೆ ಎಂಬುದು ಅರಿವಿಗೆ ಬಂದಿದೆ. ಕೂಡಲೇ ಆಘಾತಗೊಂಡ ಆರೋಪಿ ಕಟಕಟೆಯಲ್ಲೇ ಕುಸಿದುಬಿದ್ದಿದ್ದಾನೆ.
 
ತನ್ನ ಗೆಳೆಯ ಕಳ್ಳನಾಗಿ ತನ್ನ ಮುಂದೆ ನಿಂತಿದ್ದಕ್ಕೆ ತೀವ್ರ ನೋವು ವ್ಯಕ್ತ ಪಡಿಸಿದ ನ್ಯಾಯಾಧೀಶೆ, ಮಾಧ್ಯಮಿಕ ಶಾಲೆಯಲ್ಲಿ ಈತ ಒಬ್ಬ ಒಳ್ಳೆಯ ವಿದ್ಯಾರ್ಥಿ, ಈತನ ಜೊತೆ ನಾನು ಫುಟ್ಬಾಲ್ ಆಡುತ್ತಿದ್ದೆ ಎಂದು ಕೋರ್ಟ್‘ನಲ್ಲಿದ್ದ ಸಭಿಕರ ಜೊತೆ ಹೇಳಿಕೊಂಡರು. ಬಳಿಕ ಆರೋಪಿಯನ್ನು ಉದ್ದೆಶಿಸಿ, ‘ಬಾಲ್ಯದಲ್ಲಿ ಒಳ್ಳೆಯ ವಿದ್ಯಾರ್ಥಿಯಾಗಿದ್ದ ನೀನು ಈಗ ಕಳ್ಳನೆಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಇನ್ನು ಮುಂದಾದರೂ ಒಳ್ಳೆಯವನಾಗಿ ಬಾಳುತ್ತೀಯ ಎಂದು ನಂಬುತ್ತಿದ್ದೇನೆ ಎಂದ ನ್ಯಾಯಾಧೀಶೆ, ಭದ್ರತಾ ಬಾಂಡ್ ಮೇಲೆ ಜಾಮೀನು ನೀಡಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಬೀದರ್‌ನಿಂದ ದೇಶದ ಪ್ರಮುಖ ನಗರಗಳಿಗೆ ವಿಮಾನಯಾನ ಸಂಪರ್ಕ