Select Your Language

Notifications

webdunia
webdunia
webdunia
webdunia

ಬೀದರ್‌ನಿಂದ ದೇಶದ ಪ್ರಮುಖ ನಗರಗಳಿಗೆ ವಿಮಾನಯಾನ ಸಂಪರ್ಕ

ಬೀದರ್‌ನಿಂದ ದೇಶದ ಪ್ರಮುಖ ನಗರಗಳಿಗೆ ವಿಮಾನಯಾನ ಸಂಪರ್ಕ
ಪಣಜಿ , ಸೋಮವಾರ, 20 ಫೆಬ್ರವರಿ 2017 (14:03 IST)
ಬೀದರ್ ವಿಮಾನ ನಿಲ್ದಾಣದಿಂದ ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಕುರಿತಂತೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ. 
 
ಬೀದರ್ ವಿಮಾನ ನಿಲ್ದಾಣದಿಂದ ಬೆಂಗಳೂರು, ಪುಣೆ, ನಾಗ್ಪುರ, ವಿಜಯವಾಡ, ಔರಂಗಬಾದ್, ಗೋವಾ, ತಿರುಪತಿ, ವೈಜಾಗ್, ಮಂಗಳೂರು, ಚೆನ್ನೈ ನಗರಗಳಿಗೆ ಸಂಪರ್ಕ ಸಾಧ್ಯವಾಗಲಿದೆ.
 
ಬಳ್ಳಾರಿ ಜಿಲ್ಲೆಯ ಜಿಂದಾಲ್ ವಿಜಯನಗರ (ತೋರಣಗಲ್ಲು) ಏರ್‌ಪೋರ್ಟ್ ಸೇರಿದಂತೆ ದೇಶದಲ್ಲಿ ಬಳಕೆಯಾಗದೇ ಹಾಗೇ ಇರುವ 43 ವಿಮಾನ ನಿಲ್ದಾಣಗಳನ್ನು ಶೀಘ್ರದಲ್ಲೇ ಕಾರ್ಯಾಚರಣೆಗೆ ಬಳಕೆ ಮಾಡಿಕೊಳ್ಳಲು ಉದ್ದೇಶಿಸಿದೆ.
 
ಒಳನಾಡು ಪ್ರದೇಶಗಳಿಗೆ ವಿಮಾನ ಸೇವೆ ಕಲ್ಪಿಸುವ ನಿಟ್ಟಿನಿಂದ ಬಳಕೆಯಾಗದೇ ಇರುವ ವಿಮಾನ ನಿಲ್ದಾಣಗಳನ್ನು ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ. ಇವುಗಳಲ್ಲಿ 10 ನಿಲ್ದಾಣಗಳು ದಕ್ಷಿಣ ಭಾರತದಲ್ಲಿವೆ ಎಂದು ಕೇಂದ್ರ ವಿಮಾನಯಾನ ಕಾರ್ಯದರ್ಶಿ ಆರ್.ಎನ್. ಚೌಬೇ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ, ಅಮಿತ್ ಶಾ ಉಗ್ರರಿದ್ದಂತೆ: ಸಮಾಜವಾದಿ ಪಕ್ಷ