Select Your Language

Notifications

webdunia
webdunia
webdunia
webdunia

ಶಶಿಕಲಾರನ್ನು ಪರಪ್ಪನ ಜೈಲಿನಿಂದ ವರ್ಗಾಯಿಸಲು ಸಾಧ್ಯವಿಲ್ಲ: ಬಿ.ವಿ.ಆಚಾರ್ಯ

ಶಶಿಕಲಾರನ್ನು ಪರಪ್ಪನ ಜೈಲಿನಿಂದ ವರ್ಗಾಯಿಸಲು ಸಾಧ್ಯವಿಲ್ಲ: ಬಿ.ವಿ.ಆಚಾರ್ಯ
ಬೆಂಗಳೂರು , ಮಂಗಳವಾರ, 21 ಫೆಬ್ರವರಿ 2017 (19:03 IST)
ಅಕ್ರಮ ಆಸ್ತಿ ಪ್ರಕರಣಧಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಎಔಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಚೆನ್ನೈನ ಪುಳಲ್ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲು ಅವರ ಪರ ವಕೀಲರು ಹರಸಾಹಸ ಪಡುತ್ತಿದ್ದಾರೆ. ಆದರೆ, ಅವರ ಪ್ರಯತ್ನಗಳು ವಿಫಲವಾಗಲಿವೆ ಎಂದು ಹಿರಿಯ ವಕೀಲ, ವಿಶೇಷ ಅಭಿಯೋಜಕರಾದ ಬಿ.ವಿ.ಆಚಾರ್ಯ ಹೇಳಿದ್ದಾರೆ.
 
ಪರಪ್ಪನ ಅಗ್ರಹಾರ ಜೈಲಿನಿಂದ ಚೆನ್ನೈ ಜೈಲಿಗೆ ಸ್ಥಳಾಂತರಿಸಲು ಶಶಿಕಲಾ ಪರ ವಕೀಲರು ಕಾನೂನುಬದ್ಧವಾದ ಎಲ್ಲಾ ದಾರಿಗಳನ್ನು ಹುಡುಕಲು ಸರ್ವಪ್ರಯತ್ನ ಮಾಡುತ್ತಿದ್ದಾರೆ. ಕಾನೂನಿನಡಿಯಲ್ಲಿ ಶಶಿಕಲಾರನ್ನು ಚೆನ್ನೈ ಜೈಲಿಗೆ ಶಿಫ್ಟ್ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಶಶಿಕಲಾ ಪರ ವಕೀಲರು ಕೂಡಾ ಹೇಳಿಕೆ ನೀಡಿದ್ದಾರೆ. 
 
ಸುದ್ದಿಗಾರರೊಂದಿಗೆ ಮಾತನಾಡಿದ ಆಚಾರ್ಯ ಅವರು, ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಮತ್ತು ಚೆನ್ನೈ ಸೆಂಟ್ರಲ್‌ ಜೈಲಿನ ಅಧಿಕಾರಿಗಳ ಸಮ್ಮತಿಯಿಂದ ಕೈದಿಯನ್ನು ವರ್ಗಾಯಿಸಬಹುದು. ಆದರೆ, ಶಶಿಕಲಾ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರಿಂದ ಆ ಸೌಲಭ್ಯ ಅವರಿಗೆ ದೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
 ಸುಪ್ರೀಂಕೋರ್ಟ್ ಅನುಮತಿಯಿಲ್ಲದೇ ಶಶಿಕಲಾರನ್ನು ವರ್ಗಾಯಿಸಲು ಸಾಧ್ಯವಿಲ್ಲ. ಒಂದು ವೇಳೆ ಕೆಲ ಷರತ್ತುಗಳ ಮೇಲೆ ವರ್ಗಾಯಿಸಿದರೂ ಅದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ. ಕಾನೂನಿನ ಪ್ರಕಾರ ಶಶಿಕಲಾ 30 ದಿನಗಳೊಳಗಾಗಿ ಪರಿಷ್ಕ್ರತ ಮನವಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಬಹುದಾಗಿದೆ.
 
ಶಶಿಕಲಾ ಪರ ವಕೀಲರು ಜೈಲಿನ ಅಧೀಕ್ಷಕರಿಗೆ ಅಥವಾ ಕರ್ನಾಟಕದ ಕಾನೂನು ಸಚಿವರ ಮೊರೆ ಹೋಗಲು ನಿರ್ಧರಿಸಿದ್ದಾರೆ. ಆದರೆ, ಕಳೆದ 10 ವರ್ಷಗಳಿಂದ ಸರಕಾರ ಪ್ರಕರಣದ ವಿರುದ್ಧ ಹೋರಾಟ ನಡೆಸುತ್ತಿರುವುದರಿಂದ ರಾಜ್ಯದ ಕಾನೂನು ಸಚಿವರು ಅನುಮತಿ ನೀಡುವುದು ಕಷ್ಟ ಎಂದು ತಿಳಿಸಿದ್ದಾರೆ. 
 
ಏತನ್ಮಧ್ಯೆ, ಶಶಿಕಲಾ ಪರ ವಕೀಲರು ಶಶಿಕಲಾ ಅವರಿಗೆ ನೀಡಿರುವ ಸೆಲ್‌ನ ಪಕ್ಕದ ಸೆಲ್‌ನಲ್ಲಿ ಸೈನೆಡ್ ಮಲ್ಲಿಕಾರಂತಹ ಸರಣಿ ಹತ್ಯೆ ಮಾಡಿದವರಿದ್ದಾರೆ. ಮತ್ತೊಂದೆಡೆ ಕಾವೇರಿ ವಿವಾದ ಕುರಿತಂತೆ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಮಧ್ಯೆ ಉದ್ರಿಕ್ತ ವಾತಾವರಣವಿರುವುದರಿಂದ ಅವರನ್ನು ಚೆನ್ನೈಗೆ ವರ್ಗಾಯಿಸುವುದು ಸೂಕ್ತ ಎಂದು ಶಶಿಕಲಾ ಪರ ವಕೀಲರು ವಾದಿಸುತ್ತಿದ್ದಾರೆ.  
 
ತಮಿಳುನಾಡಿನಲ್ಲಿ ಬಲಗೈ ಬಂಟ ಎಡಪ್ಪಾಡಿ ಪಳನಿಸ್ವಾಮಿ ವಿಶ್ವಾಸಮತದಲ್ಲಿ ಗೆಲುವು ಸಾಧಿಸಿರುವುದು, ಎಐಎಡಿಎಂಕೆ ಉಪ ಪ್ರದಾನ ಕಾರ್ಯದರ್ಶಿ, ಸೋದರಳಿಯ ದಿನಕರನ್ ಶಶಿಕಲಾರನ್ನು ಜೈಲಿನಲ್ಲಿ ಭೇಟಿಯಾಗಿ ಚರ್ಚಿಸುತ್ತಿರುವುದು ನೋಡಿದಲ್ಲಿ ಜೈಲಿನಿಂದಲೇ ಸರಕಾರ ನಡೆಸಲು ಯತ್ನಿಸುತ್ತಿದ್ದಾರೆ ಎನ್ನುವುದಕ್ಕೆ ಸ್ಪಷ್ಟ ಸಂಕೇತವಾಗಿದೆ ಎನ್ನಲಾಗುತ್ತಿದೆ.  
 
ಶಶಿಕಲಾರನ್ನು ಚೆನ್ನೈ ಸೆಂಟ್ರಲ್ ಜೈಲಿಗೆ ವರ್ಗಾಯಿಸಿದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗುತ್ತದೆ ಎನ್ನುವುದು ಶಶಿಕಲಾ ಕನಸಾಗಿದೆ. ಆದರೆ, ಅವರ ಕನಸು ಕನಸಾಗಿಯೇ ಉಳಿಯಲಿದೆ ಎನ್ನುವುದು ವಿಶೇಷ ಅಭಿಯೋಜಕರಾದ ಬಿ.ವಿ.ಆಚಾರ್ಯ ಅವರ ಕಠಿಣ ಸಂದೇಶವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಮೀಷನರ್ ಕಚೇರಿ ಮುಂದೆಯೇ ಮಕ್ಕಳ ಜೊತೆ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ