Select Your Language

Notifications

webdunia
webdunia
webdunia
webdunia

ಮದ್ಯದ ಮತ್ತಿನಲ್ಲಿ ಹಾಡಹಗಲೇ ಮಹಿಳೆಯ ಮೇಲೆ ರೇಪ್ ಎಸಗಿದ ಭೂಪ

ಮದ್ಯದ ಮತ್ತಿನಲ್ಲಿ ಹಾಡಹಗಲೇ ಮಹಿಳೆಯ ಮೇಲೆ ರೇಪ್ ಎಸಗಿದ ಭೂಪ
ವಿಶಾಖಪಟ್ಟಣಂ , ಸೋಮವಾರ, 23 ಅಕ್ಟೋಬರ್ 2017 (16:24 IST)
ಮದ್ಯ ಸೇವಿಸಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಫುಟ್ಪಾತ್‌ ಮೇಲೆಯೇ ಮಹಿಳೆಯೊಬ್ಬಳ ಮೇಲೆ ಹಾಡಹಗಲೇ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ. ಅತ್ಯಾಚಾರವೆಸಗುತ್ತಿದ್ದ ದೃಶ್ಯಗಳನ್ನು ಅಟೋಚಾಲಕನೊಬ್ಬ ವಿಡಿಯೋ ಮಾಡಿಕೊಂಡು ಪೊಲೀಸರಿಗೆ ಒಪ್ಪಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
20 ವರ್ಷ ವಯಸ್ಸಿನ ಆರೋಪಿಯೊಬ್ಬ ಕುಡಿದ ಮತ್ತಿನಲ್ಲಿ, ಫಟ್ಪಾತ್‌ ಮೇಲೆ ಕುಳಿತಿದ್ದ ಮಹಿಳೆಯ ಮೇಲೆ ಹಾಡಹಗಲೇ ಅತ್ಯಾಟಾರವೆಸಗಿದ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 
 
ರವಿವಾರದಂದು ಮಧ್ಯಾಹ್ನ 2 ಗಂಟೆಗೆ ಜನನಿಬಿಡ ಪ್ರದೇಶದಲ್ಲಿ ನಡೆದಿದ್ದು, ವಿಡಿಯೋದಲ್ಲಿ ಆರೋಪಿ ಅತ್ಯಾಚಾರವೆಸಗುತ್ತಿರುವಾಗ ಜನರು ತಿರುಗಾಟ ನಡೆಸುತ್ತಿದ್ದರೂ ಮಹಿಳೆಯ ರಕ್ಷಣೆಗೆ ಯಾರು ಮುಂದಾಗಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಆರೋಪಿಯ ವಿರುದ್ಧ ಮಹಿಳಾ ದೌರ್ಜನ್ಯ, ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಯ ಮುಂದೆ ಹಸ್ತಮೈಥುನಗೈದ ಆರೋಪಿ ಅರೆಸ್ಟ್