Select Your Language

Notifications

webdunia
webdunia
webdunia
webdunia

ಮೋದಿಜಿ ಜನ್ಮದಿನಕ್ಕೆ ವಿರಾಟ್ ಕೊಹ್ಲಿ ವಿಶ್

ಪ್ರಧಾನಿ ಮೋದಿ
ನವದೆಹಲಿ: ಪ್ರಧಾನಿ ಮೋದಿ 72 ನೇ ಜನ್ಮದಿನಕ್ಕೆ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಶುಭಾಶಯ ಕೋರಿದ್ದಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ, ಪ್ರಧಾನಿ ಮೋದಿ ಜೊತೆ ವಿರಾಟ್ ಕೊಹ್ಲಿಗೆ ವಿಶೇಷ ಬಾಂಧವ್ಯವಿದೆ. ಕೊಹ್ಲಿ ಹೊಸ ದಾಖಲೆ ಮಾಡಿದಾಗಲೆಲ್ಲಾ ಮೋದಿ ಅಭಿನಂದಿಸಿದ್ದರು. ಅಲ್ಲದೆ, ಅನೇಕ ಬಾರಿ ಕೊಹ್ಲಿಯನ್ನು ಉದಾಹರಣೆಯಾಗಿ ತೋರಿಸಿ ಹೊಗಳಿದ್ದರು. ಅತ್ತ ಕೊಹ್ಲಿ ಕೂಡಾ ತಮ್ಮ ಮದುವೆಗೆ ಪ್ರಧಾನಿ ಮೋದಿಯವನ್ನು ಖುದ್ದಾಗಿ ಭೇಟಿ ನೀಡಿ ಆಹ್ವಾನಿಸಿದ್ದರು.

ಇದೀಗ ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಸಂದೇಶ ಕಳುಹಿಸಿರುವ ಕೊಹ್ಲಿ ‘ಮೋದಿ ಜಿ ನಿಮಗೆ ಜನ್ಮದಿನದ ಶುಭಾಶಯಗಳು. ನಿಮಗೆ ಇನ್ನಷ್ಟು ಶಕ್ತಿ, ಬಲ, ನೆಮ್ಮದಿ, ಆರೋಗ್ಯ ದೇವರು ಕೊಡಲಿ’ ಎಂದು ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಗೆ ಹ್ಯಾಪೀ ಬರ್ತ್ ಡೇ ಎಂದ ತಾರೆಯರು