Publish Date: Sat, 19 Sep 2026 (11:00 IST)
Updated Date: Sat, 19 Sep 2026 (11:03 IST)
ಸಾಮಾಜಿಕ ಜಾಲತಾಣಗಳಲ್ಲಿ ಚಲನಚಿತ್ರ ಮತ್ತು ಪ್ರಯಾಣದ ವೇಳೆ ನಡೆಯುವ ಘಟನೆಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ ಚಲಿಸುವ ರೈಲಿನಲ್ಲಿ ಸಾರ್ವಜನಿಕ ಮರ್ಯಾದೆಯ ಎಲ್ಲ ಗಡಿಗಳನ್ನು ಮೀರಿ ವರ್ತಿಸುತ್ತಿದ್ದ ಜೋಡಿಯೊಂದಕ್ಕೆ ಮಹಿಳೆಯೊಬ್ಬರು ಧೈರ್ಯದಿಂದ ಬುದ್ಧಿ ಕಲಿಸಿರುವ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದ ಪ್ರಕಾರ, ರೈಲಿನ ಬೋಗಿಯಲ್ಲಿ ಪ್ರಯಾಣಿಕರ ಸಮ್ಮುಖದಲ್ಲೇ ಯುವಕ ಮತ್ತು ಯುವತಿ ಅತಿಯಾದ ಅಸಭ್ಯ ವರ್ತನೆಯಲ್ಲಿ ತೊಡಗಿದ್ದರು. ಸಾರ್ವಜನಿಕ ಸ್ಥಳವೆಂಬ ಕನಿಷ್ಠ ಸೌಜನ್ಯವೂ ಇಲ್ಲದೆ, ರೈಲನ್ನೇ 'ಓಯೋ' (OYO) ಹೋಟೆಲ್ ತರಹ ಬಳಸಿಕೊಳ್ಳುತ್ತಿದ್ದ ಈ ಜೋಡಿಯ ವರ್ತನೆಯಿಂದ ಸಹಪ್ರಯಾಣಿಕರು ತೀವ್ರ ಮುಜುಗರಕ್ಕೊಳಗಾಗಿದ್ದರು.
ಈ ಅಸಭ್ಯತೆಯನ್ನು ಸಹಿಸದ ಮಹಿಳೆಯೊಬ್ಬರು ತಕ್ಷಣವೇ ಜೋಡಿಯ ಬಳಿ ತೆರಳಿ, ಸಾರ್ವಜನಿಕ ಸ್ಥಳದಲ್ಲಿ ಸರಿಯಾಗಿ ನಡೆದುಕೊಳ್ಳುವಂತೆ ಆಕ್ಷೇಪ ವ್ಯಕ್ತಪಡಿಸಿ ತಡೆದಿದ್ದಾರೆ. ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸುವ ಬದಲು, ಆ ಯುವತಿ ತಾನೇ ಎದುರುಬಿದ್ದು ಮಹಿಳೆಯೊಂದಿಗೆ ಉದ್ಧಟತನದಿಂದ ವಾಗ್ವಾದಕ್ಕೆಿಳಿದಿದ್ದಾಳೆ.ಯುವತಿಯ ಈ ಉದ್ಧಟತನ ಮತ್ತು ಅಹಂಕಾರದ ಮಾತುಗಳಿಂದ ಕೆರಳಿದ ಮಹಿಳೆ, ಆಕೆಗೆ ಸಾಲು ಸಾಲು ಕಪಾಳಮೋಕ್ಷ ಮಾಡಿ ಸರಿಯಾಗಿಯೇ ಪಾಠ ಕಲಿಸಿದ್ದಾರೆ. ಕಪಾಳಮೋಕ್ಷದ ಬಳಿಕ ಅಸಭ್ಯವಾಗಿ ವರ್ತಿಸುತ್ತಿದ್ದ ಜೋಡಿ ಸಮ್ಮುಖದಲ್ಲೇ ಸುಮ್ಮನಾಗಿದೆ.ಸಾರ್ವಜನಿಕ ಸ್ಥಳಗಳಲ್ಲಿ ಸಂಯಮ ಮತ್ತು ಶಿಸ್ತು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವವರಿಗೆ ಈ ರೀತಿ ತಕ್ಷಣವೇ ಬುದ್ಧಿ ಕಲಿಸಿದ್ದು ಸೂಕ್ತ ಎಂದು ಅನೇಕ ನೆಟ್ಟಿಗರು ಮಹಿಳೆಯ ಧೈರ್ಯವನ್ನು ಬೆಂಬಲಿಸಿ ಕಮೆಂಟ್ ಮಾಡುತ್ತಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ