Daily Horoscope

Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಹೇಳಿದ್ರೂ ನೋ ಚಾನ್ಸ್ ಅಂತಿರುವ ಸಿದ್ದರಾಮಯ್ಯ: ಸಜ್ಜನರು ರಾಜಕಾರಣಕ್ಕೆ ಬರೋದು ಕಷ್ಟ ಎಂದ ಸಿದ್ದು

Siddaramaiah-DK Shivakumar-Rahul Gandhi
ಬೆಂಗಳೂರು: ಸ್ವತಃ ರಾಹುಲ್ ಗಾಂಧಿಯೇ ಹೇಳಿದ್ರೂ ಮತ್ತೆ ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ನೋ ಚಾನ್ಸ್ ಎನ್ನುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸಜ್ಜನರು ರಾಜಕಾರಣಕ್ಕೆ ಬರೋದು ಕಷ್ಟ ಎಂದಿದ್ದಾರೆ.
 
ಈ ಹಿಂದೆಯೇ ಸಿದ್ದರಾಮಯ್ಯ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದಿದ್ದರು. ಆದರೆ ಇತ್ತೀಚೆಗೆ ದೆಹಲಿಯಲ್ಲಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದಾಗ ಅವರು, ಚುನಾವಣೆ ಕಣದಿಂದ ಹಿಂದೆ ಸರಿಯಬೇಡಿ ನಿಮ್ಮ ಅಗತ್ಯ ತುಂಬಾ ಇದೆ ಎಂದು ಹೇಳಿದ್ದರು ಎನ್ನಲಾಗಿದೆ. ಹೀಗಾಗಿ ಸಿದ್ದು ಮತ್ತೆ ಚುನಾವಣೆಗೆ ಸ್ಪರ್ಧಿಸಬಹುದೇನೋ ಎಂಬ ನಿರೀಕ್ಷೆಯಿತ್ತು.
 
ಆದರೆ ರಾಹುಲ್ ಗಾಂಧಿಯೇ ಹೇಳಿದರೂ ಸಿದ್ದರಾಮಯ್ಯ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂಬುದು ಅವರ ಮಾತುಗಳಲ್ಲಿ ಸ್ಪಷ್ಟವಾಗುತ್ತಿದೆ. ‘ಚುನಾವಣೆ ವ್ಯವಸ್ಥೆ ಸರಿ ಇಲ್ಲದಿರುವುದರಿಂದ ಮತ್ತೆ ಚುನಾವಣೆಗೆ ಸ್ಪರ್ಧಿಸಲ್ಲ. ಚುನಾವಣೆ ವ್ಯವಸ್ಥೆ ಜನರಿಂದ ಅಲ್ಲ, ರಾಜಕಾರಣಗಳಿಂದ ಹದಗೆಟ್ಟಿದೆ. ಅಂತಹವರಿಂದ ರಾಜಕಾರಣಕ್ಕೆ ಸಜ್ಜನರು ಬರುವುದು ಕಷ್ಟವಾಗಿದೆ. ಹೀಗಾಗಿ ಮತ್ತೆ ಸ್ಪರ್ಧಿಸಲ್ಲ’ ಎಂದು ಪುನರುಚ್ಚರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಛೇ.. ಇದೆಂಥಾ ಅಮಾನವೀಯತೆ… ಹೈದರಾಬಾದ್ನಲ್ಲಿ ಮಹಿಳೆಯ ಕೂದಲು ಹಿಡಿದೆಳೆದು ಇದೆಂಥಾ ದೌರ್ಜನ್ಯವೆಸಗಿದ ಪೊಲೀಸ್ Video