Publish Date: Thu, 30 Jul 2026 (09:49 IST)
Updated Date: Thu, 30 Jul 2026 (09:53 IST)
ರೈಲು ಹೊರಟ ಮೇಲೆ ಓಡಿ ಹೋಗಿ ಮಗುವಿನ ಜೊತೆಗೆ ಹತ್ತಲು ಹೋದ ಮಹಿಳೆಯೊಬ್ಬರು ಹಳಿಯಡಿಗೆ ಬಿದ್ದು ಧಾರುಣವಾಗಿ ಸಾವನ್ನಪ್ಪಿದ ಭೀಕರ ವಿಡಿಯೋವೊಂದು ವೈರಲ್ ಆಗಿದೆ.
ರೈಲ್ವೇ ನಿಲ್ದಾಣದಲ್ಲಿ ಕೇವಲ 5 ರಿಂದ 10 ಸೆಕೆಂಡ್‌ಗಳ ಕಾಲ ತೋರಿದ ಸಣ್ಣ ಅವಸರ ಹಾಗೂ ನಿರ್ಲಕ್ಷ್ಯ, ಮಹಿಳೆಯೊಬ್ಬರ ಜೀವವನ್ನೇ ಬಲಿ ಪಡೆದಿದೆ. ದುರಂತವೆಂದರೆ ಆಕೆಯ ಕೈಯಲ್ಲಿ ಮಗು ಕೂಡಾ ಇತ್ತು. ಅಲ್ಲಿದ್ದವರು ಓಡಿ ರಕ್ಷಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ.
ರೈಲು ನಿಲ್ದಾಣದಿಂದ ಹೊರಡುತ್ತಿದ್ದಂತೆಯೇ, ಅದನ್ನು ಹೇಗಾದರೂ ಮಾಡಿ ಹತ್ತಲೇಬೇಕೆಂಬ ಆತುರದಲ್ಲಿ ಯುವತಿ ಓಡುತ್ತಾ ಚಲಿಸುವ ರೈಲನ್ನು ಏರಲು ಯತ್ನಿಸಿದ್ದಾರೆ. ಆದರೆ, ಆ ಕ್ಷಣದಲ್ಲಿ ಆಕೆಯ ಕಾಲು ಜಾರಿ, ನಿಯಂತ್ರಣ ಸಿಗದೆ ನೇರವಾಗಿ ಚಲಿಸುವ ರೈಲಿನ ಚಕ್ರಗಳ ಅಡಿಗೆ ಬಿದ್ದಿದ್ದಾರೆ. ನಿಲ್ದಾಣದಲ್ಲಿದ್ದ ಜನರು ಹಾಗೂ ಪ್ರತ್ಯಕ್ಷದರ್ಶಿಗಳು ತಕ್ಷಣವೇ ಆಕೆಯನ್ನು ಉಳಿಸಲು ತಮ್ಮೆಲ್ಲಾ ಪ್ರಯತ್ನಗಳನ್ನು ನಡೆಸಿದರಾದರೂ, ದುರದೃಷ್ಟವಶಾತ್ ಆಕೆಯ ಜೀವವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ನೀವು ಹತ್ತಬೇಕಾದ ರೈಲು ತಪ್ಪಿಹೋದರೆ ಸ್ವಲ್ಪ ಸಮಯ ಕಾಯಬೇಕಾಗಬಹುದು ಅಥವಾ ತಡವಾಗಿ ತಲುಪಬಹುದು. ಆದರೆ, ಆತುರದಲ್ಲಿ ಜೀವವೇ ಹೊರಟುಹೋದರೆ ಆ ನಷ್ಟವನ್ನು ಯಾವುದೇ ಕಾರಣಕ್ಕೂ ಭರ್ತಿ ಮಾಡಲು ಸಾಧ್ಯವಿಲ್ಲ. ರೈಲು ಚಲಿಸುತ್ತಿರುವಾಗ ವೇಗ ಮತ್ತು ವೇದಿಕೆಯ ನಡುವಿನ ಅಂತರದ ಅರಿವಾಗುವುದಿಲ್ಲ. ಸಣ್ಣ ಜಾರುವಿಕೆಯೂ ಸಹ ಚಕ್ರಗಳ ಅಡಿಗೆ ಸಿಲುಕಲು ಕಾರಣವಾಗುತ್ತದೆ. ಇಂತಹ ಸಾಕಷ್ಟು ದುರಂತ ಪ್ರಕರಣಗಳು ಘಟಿಸುತ್ತಲೇ ಇರುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳು ಹರಿದಾಡುತ್ತವೆ. ಇಲ್ಲೂ ಅದೇ ರೀತಿ ಧಾವಂತ ಮಾಡಲು ಹೋಗಿ ತಾಯಿ,ಮಗು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ