Select Your Language

Notifications

webdunia
webdunia
webdunia
webdunia

Video: ಸಂಸದೆ ಕಂಗನಾ ರನೌತ್ ಕಾಲ ಬಳಿ ಕೂತು ವೃದ್ಧರು ಸಮಸ್ಯೆ ಹೇಳಿದರೂ ಕರಗದ ಮನಸ್ಸು

Kangana Ranaut

Krishnaveni K

ಹಿಮಾಚಲಪ್ರದೇಶ , ಬುಧವಾರ, 16 ಜುಲೈ 2025 (14:35 IST)
Photo Credit: X
ಹಿಮಾಚಲಪ್ರದೇಶ: ಕಳೆದ ಲೋಕಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾದ ನಟಿ ಕಂಗನಾ ರನೌತ್ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೃದ್ಧರಿಬ್ಬರು ಸಂಸದೆಯ ಕಾಲ ಬಳಿ ಕೂತು ಸಮಸ್ಯೆ ಹೇಳುತ್ತಿದ್ದರೂ ಆಕೆ ಕ್ಯಾರೇ ಎಂದಿಲ್ಲ.

ಬಾಲಿವುಡ್ ನಟಿ ಕಂಗನಾ ರನೌತ್ ಈಗ ಬಿಜೆಪಿ ಸಂಸದೆ ಕೂಡಾ. ಆದರೆ ಆಕೆಯ ಕಾರ್ಯವೈಖರಿ ಬಗ್ಗೆ ಸ್ಥಳೀಯರಲ್ಲಿ ಭಾರೀ ಆಕ್ರೋಶವಿದೆ. ಇತ್ತೀಚೆಗೆ ಮಂಡಿ ಕ್ಷೇತ್ರದಲ್ಲಿ ಮಳೆಯಿಂದಾಗಿ ಪ್ರವಾಹ ಸದೃಶ ಸ್ಥಿತಿಯಿರುವಾಗಲೂ ಜನರ ಸಮಸ್ಯೆಗೆ ಕ್ಯಾರೇ ಎಂದಿರಲಿಲ್ಲ.

ಮೊನ್ನೆಯಷ್ಟೇ ನನಗೆ ಜನ ಯಾವತ್ತೂ ನನ್ನ ಬಳಿ ನೀರು ಸರಿ ಬರಲ್ಲ, ಪೈಪು ಸರಿ ಇಲ್ಲ ಎಂದು ಸಮಸ್ಯೆ ಹೇಳಿಕೊಂಡು ಬರುವುದು ಇಷ್ಟವಾಗುವುದಿಲ್ಲ ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದರು. ಅದರ ಬೆನ್ನಲ್ಲೇ ಈಗ ವೃದ್ಧರ ಜೊತೆ ಕಂಗನಾ ನಡೆದುಕೊಂಡ ವಿಡಿಯೋವೊಂದು ವೈರಲ್ ಆಗಿದೆ.

70-80 ವರ್ಷ ಆಸುಪಾಸಿನ ವೃದ್ಧರು ಕಂಗನಾ ಕಾಲ ಬುಡದಲ್ಲಿ ನೆಲದಲ್ಲಿ ಕೂತು ಕೈ ಮುಗಿದು ತಮ್ಮ ಸಮಸ್ಯೆ ಹೇಳುತ್ತಿದ್ದರೆ ನಾನೇನೂ ಮಾಡಲು ಸಾಧ್ಯವಿಲ್ಲ. ಇದು ಇಲ್ಲಿನ ಸ್ಥಳೀಯ ಸರ್ಕಾರದ ಕೆಲಸ. ನೀವು ಮುಖ್ಯಮಂತ್ರಿಗಳಿಗೆ ಈ ಸಮಸ್ಯೆ ಹೇಳಿ ಎಂದಿದ್ದಾರೆ. ಅವರ ಈ ವಿಡಿಯೋ ವೈರಲ್ ಆಗಿದ್ದು ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಯಾಕೆ ಆಕೆಯ ಕಾಲಿಗೆ ಬೀಳುತ್ತೀರಿ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.




Share this Story:

Follow Webdunia kannada

ಮುಂದಿನ ಸುದ್ದಿ

ನಿಮಿಷ ಪ್ರಿಯಗೆ ಈಗ ಒಂದೊಂದು ನಿಮಿಷವೂ ನರಕ: ಮೆಹ್ದಿ ಕುಟುಂಬ ಹೇಳಿದ್ದೇನು