Select Your Language

Notifications

webdunia
webdunia
webdunia
webdunia

Viral video: ತಿರುಪತಿ ದೇವಾಲಯದಲ್ಲೇ ನಮಾಜ್ ಮಾಡಿದ ಮುಸ್ಲಿಂ ವ್ಯಕ್ತಿ

Namaz in Tirupati temple

Krishnaveni K

ತಿರುಪತಿ , ಶುಕ್ರವಾರ, 23 ಮೇ 2025 (13:55 IST)
Photo Credit: X
ತಿರುಪತಿ: ಹಿಂದೂಗಳ ಪವಿತ್ರ ಧಾರ್ಮಿಕ ಸ್ಥಳವಾದ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲೇ ಮುಸ್ಲಿಂ ವ್ಯಕ್ತಿಯೊಬ್ಬ ಏಕಾಏಕಿ ಬಂದು ನಮಾಜ್ ಮಾಡಿ ಹೋದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವ್ಯಕ್ತಿಯೊಬ್ಬ ಮುಸ್ಲಿಂ ಟೋಪಿ ಧರಿಸಿ ಕಾರಿನಲ್ಲಿ ಬಂದಿಳಿಯುತ್ತಾನೆ. ನೇರವಾಗಿ ತಿರುಪತಿ ತಿರುಮಲ ಕಲ್ಯಾಣ ಮಂಟಪದಲ್ಲಿ ಹಝರತ್ ಕ್ಯಾಪ್ ಧರಿಸಿಕೊಂಡೇ ನಮಾಜ್ ಮಾಡುತ್ತಾನೆ. ಸುಮಾರು 10 ನಿಮಿಷ ಆತ ನಮಾಜ್ ಮಾಡುತ್ತಾನೆ.

ಬಳಿಕ ಸದ್ದಿಲ್ಲದೇ ಅಲ್ಲಿಂದ ತೆರಳುತ್ತಾನೆ. ಐಷಾರಾಮಿ ಕಾರಿನಲ್ಲಿ ಬಂದ ವ್ಯಕ್ತಿ ತಿರುಪತಿ ಸನ್ನಿಧಿಯಲ್ಲೇ ನಮಾಜ್ ಮಾಡಿರುವುದು ಯಾಕೆ ಎಂಬುದು ಈಗ ಪ್ರಶ್ನಾರ್ಹವಾಗಿದೆ. ಇದರ ಬಗ್ಗೆ ಇದೀಗ ತಿರುಮಲ ಆಡಳಿತ ಮಂಡಳಿ ತನಿಖೆಗೆ ಮುಂದಾಗಿದೆ.

ಆತ ಯಾರು, ಎಲ್ಲಿಂದ ಬಂದಿದ್ದಾನೆ ಎಂದು ತನಿಖೆಯಾಗುತ್ತಿದೆ. ಆತನ ಕಾರು ನಂಬರ್ ಕೂಡಾ ನೋಟ್ ಮಾಡಿಕೊಳ್ಳಲಾಗಿದ್ದು ಅದರ ಜಾಡು ಹಿಡಿದು ತನಿಖೆ ನಡೆಸಲಾಗುತ್ತಿದೆ. ತಮಿಳುನಾಡು ನೋಂದಣಿ ಸಂಖ್ಯೆಯಿರುವ ಕಾರಿನಲ್ಲಿ ಈತ ಬಂದಿದ್ದ.



Share this Story:

Follow Webdunia kannada

ಮುಂದಿನ ಸುದ್ದಿ

Arecanut price today: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಇಂದು ಮತ್ತಷ್ಟು ಬೆಲೆ ಏರಿಕೆ