Daily Horoscope

Select Your Language

Notifications

webdunia
webdunia
webdunia
webdunia

ಅಳಬೇಡ ಸುಮ್ಕಿರು... ಅಳುತ್ತಿದ್ದ ಮಗುವನ್ನು ಸಂತೈಸಿದ ಕೋತಿ Video

Viral video of monkey
Photo Credit: X
ಅಳಬೇಡ ಸುಮ್ಮನಿರು, ನಿನಗೆ ನಾನಿದ್ದೇನೆ ಎಂದು ಹೇಳುವಂತಿದೆ ಈ ಕೋತಿಯ ವರ್ತನೆ. ಅಳುತ್ತಿದ್ದ ಮಗುವನ್ನು ಸಂತೈಸಿದ ಕೋತಿಯ ಈ ವಿಡಿಯೋ ಇಲ್ಲಿದೆ ನೋಡಿ.

ಮಂಗಗಳ ವರ್ತನೆ ಹೆಚ್ಚು ಕಡಿಮೆ ಮನುಷ್ಯರನ್ನೇ ಹೋಲುತ್ತದೆ. ಅವುಗಳಿಗೆ ಮನುಷ್ಯರ ಸಂವೇದನೆಗಳೂ ಅರ್ಥವಾಗುತ್ತದೆ. ಮಂಗನಿಂದ ಮಾನವ ಎಂಬ ಸಿದ್ಧಾಂತವೇ ಇದೆಯಲ್ಲಾ? ಈ ವಿಡಿಯೋ ನೋಡಿದರೆ ಕೋತಿ ಎಂದು ಹೀಯಾಳಿಸುವ ಮೊದಲು ಅದಕ್ಕಿರುವ ಮಾನವೀಯತೆ ನೋಡಿ ಕೊಂಡಾಡಲೇಬೇಕಾಗುತ್ತದೆ.

ಮಗುವೊಂದು ರಸ್ತೆಯಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿರುತ್ತದೆ. ಅದು ಯಾವ ಕಾರಣಕ್ಕೆ ಅಳುತ್ತಿದೆ ಎನ್ನುವುದು ಗೊತ್ತಾಗಿಲ್ಲ. ಆದರೆ ಅಲ್ಲೇ ಪಕ್ಕದಲ್ಲಿ ಮಗುವನ್ನು ನೋಡುತ್ತಿದ್ದ ಮಂಗನಿಗೆ ಏನನಿಸಿತೋ ಸೀದಾ ಹೋಗಿ ಮಗುವನ್ನು ತಬ್ಬಿಕೊಂಡಿದೆ.

ಅಷ್ಟೇ ಅಲ್ಲ ತಲೆ ದಡವಿ ಅಳಬೇಡ ಎನ್ನುವಂತೆ ಅಪ್ಪಿ ಹಿಡಿದು ಸಂತೈಸಿದೆ. ಈ ಕ್ಷಣವನ್ನು ನೋಡಿದರೆ ನಿಮಗೂ ಹೃದಯ ಭಾರವೆನಿಸೀತು. ಮಂಗಗಳು ಕೇವಲ ತೊಂದರೆ ಕೊಡೋದು ಮಾತ್ರವಲ್ಲ, ಮನುಷ್ಯನ ಕಷ್ಟಕ್ಕೂ ಜೊತೆಯಾಗುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.


Share this Story:

Follow Webdunia kannada

ಮುಂದಿನ ಸುದ್ದಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ