ಹೊತ್ತಿ ಉರಿಯುತ್ತಿದ್ದ ಚಾಲಕರಹಿತ ಕಾರು ರಸ್ತೆಯಲ್ಲಿ ಓಡಾಡುವುದು ನೋಡಿ ಓಡಿದ ಜನ: ವೈರಲ್ ವಿಡಿಯೋ

Krishnaveni K
ಸೋಮವಾರ, 14 ಅಕ್ಟೋಬರ್ 2024 (11:29 IST)
Photo Credit: X
ಜೈಪುರ: ಬೆಂಕಿಗೆ ಆಹುತಿಯಾಗಿದ್ದ ಚಾಲಕರಹಿತ ಕಾರೊಂದು ನಡು ರಸ್ತೆಯಲ್ಲಿ ಎಗ್ಗಿಲ್ಲದೇ ಓಡಾಡುತ್ತಿದ್ದರೆ ಸುತ್ತಮುತ್ತಲಿದ್ದ ಜನ ಎದ್ದೆನೋ ಬಿದ್ದೆನೋ ಎಂದು ಓಡಿದ ವೈರಲ್ ವಿಡಿಯೋ ಈಗ ಎಲ್ಲರ ಗಮನಸೆಳೆಯುತ್ತಿದೆ.

ಜೈಪುರದ ಅಜ್ಮೀರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ತನ್ನಿಂದ ತಾನೇ ಚಾಲನೆಗೊಳಗಾದ ಕಾರು, ಬೆಂಕಿ ಉಗುಳುತ್ತಾ ರಸ್ತೆಯಲ್ಲಿ ಎಗ್ಗಿಲ್ಲದೇ ಚಲಿಸಿದ್ದು, ಅಕ್ಕಪಕ್ಕದ ವಾಹನಗಳು, ರಸ್ತೆ ವಿಭಜಕಕ್ಕೆ ಗುದ್ದುತ್ತಾ ಸಂಚರಿಸಿದೆ. ಹೊತ್ತಿ ಉರಿಯುತ್ತಿದ್ದ ಕಾರು ತಮ್ಮತ್ತ ಬಂದರೆ ಎಂದು ಜನ ತಮ್ಮ ವಾಹನವನ್ನೂ ಅರ್ಧದಲ್ಲೇ ಬಿಟ್ಟು ಓಡಿದ್ದಾರೆ.

ಕೊನೆಗೆ ರಸ್ತೆ ವಿಭಜಕವೊಂದಕ್ಕೆ ಗುದ್ದಿ ಕಾರು ತಾನಾಗಿಯೇ ನಿಂತಿದೆ. ಆದರೆ ಅಷ್ಟರಲ್ಲಿ ಅದು ಭಾಗಶಃ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಕಾರಿನ ಅಕ್ಕಪಕ್ಕ ಇದ್ದ ಯಾರಿಗೂ ಯಾವುದೇ ಗಾಯ, ನೋವುಗಳಾಗಿಲ್ಲ. ಇತರೆ ವಾಹನಕ್ಕೆ ಗುದ್ದಿದರೂ ಅವು ಯಾವುದಕ್ಕೂ ಬೆಂಕಿ ತಗುಲಿಲ್ಲ.

ಆದರೆ ಬೆಂಕಿ ಉಂಡೆಯಂತೆ ತಮ್ಮನ್ನೇ ಅಟ್ಟಾಡಿಸಿಕೊಂಡು ಬರುತ್ತಿರುವ ಕಾರನ್ನು ನೋಡಿ ಜನ ಭಯಭೀತರಾಗಿ ಓಡಿದ್ದಾರೆ. ಈ ರೀತಿ ಹೆದ್ದಾರಿಯಲ್ಲಿ ಕಾರಿಗೆ ಬೆಂಕಿ ತಗುಲಿರುವುದು ವಿಶೇಷವೇನಲ್ಲ. ಆದರೆ ಬೆಂಕಿ ತಗುಲಿದ ಬಳಿಕವೂ ಆ ಕಾರು ಚಾಲಕನಿಲ್ಲದಿದ್ದರೂ ರಸ್ತೆಯಲ್ಲಿ ಓಡಾಡಿದ್ದು ವಿಶೇಷವಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಾ ಕೃತಿಕಾ ರೆಡ್ಡಿ ಕೊಲ್ಲಲು ಡಾ ಮಹೇಂದ್ರ ರೆಡ್ಡಿ ಅನಸ್ತೇಷಿಯಾ ಕದ್ದಿದ್ದು ಎಲ್ಲಿಂದ ಗೊತ್ತಾ

ಖಾರ ಅಗತ್ಯಕ್ಕಿಂತ ಜಾಸ್ತಿಯಿದ್ರೆ ಒಳ್ಳೇದಲ್ಲ: ನಾರಾ ಲೋಕೇಶ್ ಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಉದ್ಯಮಿಗಳಾಯ್ತು, ಈಗ ಕ್ರಿಕೆಟಿಗರ ಸರದಿ: ಬೆಂಗಳೂರು ಟ್ರಾಫಿಕ್ ಬಗ್ಗೆ ಸುನಿಲ್ ಜೋಶಿ ಹೇಳಿದ್ದೇನು

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಹಾರ್ಟ್ ಅಟ್ಯಾಕ್ ಆದ ತಕ್ಷಣ ಟ್ಯಾಬ್ಲೆಟ್ ತೆಗೆದುಕೊಂಡ್ರೆ ರಿಸ್ಕ್ ಕಡಿಮೆಯಾಗುತ್ತಾ: ಡಾ ಸಿಎನ್ ಮಂಜುನಾಥ್

ಮುಂದಿನ ಸುದ್ದಿ
Show comments