ಮುರ್ಷಿದಾಬಾದ್: ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ನಮಗೆ ರಕ್ಷಣೆ ಬೇಕು ಎಂದು ಇಲ್ಲಿನ ಹಿಂದೂ ನಾಗರಿಕರು ಮಾಧ್ಯಮಗಳ ಮುಂದೆ ಅಂಗಲಾಚುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಬಿಲ್ ಮುಸ್ಲಿಮರ ಆಕ್ರೋಶಕ್ಕೆ ಗುರಿಯಾಗಿದೆ. ಈ ಬಿಲ್ ನಿಂದ ನಮಗೆ ಅನ್ಯಾಯವಾಗಿದೆ. ಅನಗತ್ಯವಾಗಿ ನಮ್ಮ ಧರ್ಮದ ವಿಚಾರದಲ್ಲಿ ಸರ್ಕಾರ ಮೂಗು ತೂರಿಸುತ್ತಿದೆ ಎನ್ನುವುದು ಅವರ ಆಕ್ರೋಶವಾಗಿದೆ.
ಇದೇ ಕಾರಣಕ್ಕೆ ಪಶ್ಚಿಮ ಬಂಗಾಲದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಕೆಲವರು ವಾಹನಗಳಿಗೆ ಬೆಂಕಿ ಹಚ್ಚಿ, ಸರ್ಕಾರೀ ಕಚೇರಿಗೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಇಲ್ಲಿನ ಹಿಂದೂ ನಿವಾಸಿಗಳ ಮೇಲೆ ಹಿಂಸಾಚಾರ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಹಲವರು ಪಲಾಯನ ಮಾಡಿರುವ ವಿಚಾರ ವರದಿಯಾಗಿದೆ. ಹಿಂಸಾಚಾರದಲ್ಲಿ ಮೂವರು ಹಿಂದೂಗಳನ್ನು ಹತ್ಯೆ ಮಾಡಲಾಗಿದೆ.
ಇದರ ಬೆನ್ನಲ್ಲೇ ಹಿಂದೂ ವ್ಯಕ್ತಿಯೊಬ್ಬರು ಮಾಧ್ಯಮಗಳ ಮುಂದೆ ನಮಗೆ ರಕ್ಷಣೆ ಕೊಡಿ ಎಂದು ಅಂಗಲಾಚುತ್ತಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿ ಹಿಂದೂಗಳಿಗೆ ಭಯದ ವಾತಾವರಣವಿದೆ. ನಮಗೆ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನಮಗೆ ರಕ್ಷಣೆ ಕೊಡಲು ವಿಫಲವಾಗಿದೆ. ರಾಷ್ಟ್ರಪತಿ ಆಡಳಿತ ಜಾರಿಯಾಗಲಿ ಎಂದು ಆತ ಆಗ್ರಹಿಸುತ್ತಾನೆ. ಈ ವಿಡಿಯೋ ಇಲ್ಲಿದೆ ನೋಡಿ.