Select Your Language

Notifications

webdunia
webdunia
webdunia
webdunia

Vijay Rupani: ಕೊನೆಗೂ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

ಗುಜರಾತ್ ಸಿಎಂ ವಿಜಯ್ ರೂಪಾನಿ

Sampriya

ಅಹಮದಾಬಾದ್‌ , ಭಾನುವಾರ, 15 ಜೂನ್ 2025 (16:35 IST)
ಅಹಮದಾಬಾದ್‌: ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಡಿಎನ್‌ಎ ಮತ್ತು ಏರ್ ಇಂಡಿಯಾ ವಿಮಾನ AI 171 ರಿಂದ ವಶಪಡಿಸಿಕೊಂಡ ಅವಶೇಷಗಳು ಹೋಲಿಕೆಯಾಗಿವೆ ಎಂದು ಗುಜರಾತ್ ಆರೋಗ್ಯ ಸಚಿವ ಋಷಿಕೇಶ್ ಪಟೇಲ್ ಭಾನುವಾರ ಮಧ್ಯಾಹ್ನ ದೃಢಪಡಿಸಿದ್ದಾರೆ. 

ಬಿ ಜೆ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಡಿಎನ್‌ಎ ಗುರುತಿನ ಪ್ರಕ್ರಿಯೆಗಾಗಿ ರಕ್ತದ ಮಾದರಿಯನ್ನು ಒದಗಿಸಲು ರೂಪಾನಿ ಅವರ ಮಗ ಶನಿವಾರ ಅಹಮದಾಬಾದ್‌ನಲ್ಲಿದ್ದರು.

ಜೂನ್ 12ರಂದು ಮಧ್ಯಾಹ್ನ 1.38ರ ಸುಮಾರಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಟ ಏರ್‌ಇಂಡಿಯಾ ವಿಮಾನ ಅಪಘಾತಕ್ಕೀಡಾಯಿತು. ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿದ್ದ 242 ಜನರಲ್ಲಿ 68 ವರ್ಷದ ರೂಪಾನಿ ಕೂಡ ಒಬ್ಬರು. ಅವರ ಮೃತದೇಹವನ್ನು ಭಾನುವಾರ ಅದೇ ಸಮಯಕ್ಕೆ ಅಪಘಾತ ಸ್ಥಳದಿಂದ ಆಂಬ್ಯುಲೆನ್ಸ್‌ಗೆ ಲೋಡ್ ಮಾಡಲಾಯಿತು.

ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಶವಾಗಾರ ಸಂಕೀರ್ಣದಲ್ಲಿ ಮಾತನಾಡಿದ ಆರೋಗ್ಯ ಸಚಿವ ಪಟೇಲ್, "ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಡಿಎನ್ಎ ಪರಿಶೀಲನೆ ಪೂರ್ಣಗೊಂಡಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಅಹಮದಾಬಾದ್ ವಿಮಾನ ದುರಂತ ಆಯ್ತು ಅಂತ ನಾವೇನು ಮೋದಿ ರಾಜೀನಾಮೆ ಕೇಳಿದ್ವಾ