Select Your Language

Notifications

webdunia
webdunia
webdunia
webdunia

ಭಾರತದಿಂದ ಪರಾರಿಯಾಗಿದ್ದ ವಿಜಯ್ ಮಲ್ಯ ಮಗನ ಮದುವೆಯಲ್ಲಿ ಪ್ರತ್ಯಕ್ಷ

ಭಾರತದಿಂದ ಪರಾರಿಯಾಗಿದ್ದ ವಿಜಯ್ ಮಲ್ಯ ಮಗನ ಮದುವೆಯಲ್ಲಿ ಪ್ರತ್ಯಕ್ಷ

Sampriya

ಬೆಂಗಳೂರು , ಸೋಮವಾರ, 24 ಜೂನ್ 2024 (18:14 IST)
Photo Courtesy X
ಬೆಂಗಳೂರು:  900 ಕೋಟಿಗೂ ಅಧಿಕ ಸಾಲ ವಂಚನೆ ಮಾಡಿ ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರು ತಮ್ಮ ಪುತ್ರನ ಮದುವೆಯಲ್ಲಿ ಕಾಣಿಸಿಕೊಂಡರು. ಉದ್ಯಮಿ ವಿಜಯ್ ಮಲ್ಯ ಅವರ ಪುತ್ರ ಸಿದ್ಧಾರ್ಥ ಮಲ್ಯ ಹಾಗೂ ಜಾಸ್ಮಿನ್ ಮದುವೆ ಶನಿವಾರ ಯುಕೆಯಲ್ಲಿ ನೆರವೇರಿತು.

68 ವರ್ಷದ ವಿಜಯ್ ಮಲ್ಯ ಅವರು 900 ಕೋಟಿಗೂ ಅಧಿಕ ಸಾಲ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇಡಿ ಮತ್ತು ಕೇಂದ್ರೀಯ ತನಿಖಾ ದಳದಿಂದ ತನಿಖೆ ಮುಂದುವರೆದಿದೆ.

ಅದ್ದೂರಿ ಮದುವೆಯಲ್ಲಿ ಆಪ್ತರು ಹಾಗೂ ಕುಟುಂಬಸ್ಥರು ಪಾಲ್ಗೊಂಡಿದ್ದರು.  ಕಿಂಗ್‌ಫಿಶರ್ ಏರ್‌ಲೈನ್ಸ್ ಪ್ರವರ್ತಕ ವಿಜಯ್ ಮಲ್ಯ ಅವರು 2012 ರಲ್ಲಿ ತಮ್ಮ ಏರ್‌ಲೈನ್ ಪತನಕ್ಕೆ ಸಂಬಂಧಿಸಿದ ₹ 9,000 ಕೋಟಿಗೂ ಹೆಚ್ಚು ಮೊತ್ತದ ಹಣ ವರ್ಗಾವಣೆ ಮತ್ತು ಬ್ಯಾಂಕ್ ಸಾಲದ ಡೀಫಾಲ್ಟ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರು ಮಾರ್ಚ್ 2016 ರಲ್ಲಿ ಭಾರತದಿಂದ ಪಲಾಯನ ಮಾಡಿ ಪ್ರಸ್ತುತ ಯುಕೆಯಲ್ಲಿ ವಾಸಿಸುತ್ತಿದ್ದಾರೆ.

ಸಿದ್ಧಾರ್ಥ ಮಲ್ಯ ಮತ್ತು ಜಾಸ್ಮಿನ್ ಅವರ ವಿವಾಹವು ಅದ್ಧೂರಿಯಾಗಿ ನೆರವೇರಿತು.  ಸಮಾರಂಭದ ಎರಡು ಫೋಟೋಗಳನ್ನು ಸಿದ್ಧಾರ್ಥ ಮಲ್ಯ ಅವರು ಭಾನುವಾರ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನ ಪರಿಷತ್ ಸದಸ್ಯರಾಗಿ 17 ಸದಸ್ಯರು ಪ್ರಮಾಣ ವಚನ ಸ್ವೀಕಾರ